ಬೆಂಗಳೂರು: ಡೆಂಗ್ಯೂ ಪ್ರಕರಣಗಳು 2024ನೇ ಸಾಲಿನಲ್ಲಿ 31,934 ಕಂಡು ಬಂದಿದ್ದರೆ 2025ರ ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ 6,561 ಕ್ಕೆ ಇಳಿದಿದ್ದು, ಶೇಕಡವಾರು 81% ಕಡಿಮೆಯಾಗಿದೆ. ಅಲ್ಲದೆ, ಸಾವು ಸಂಭವಿಸಿಲ್ಲ. ಇದು ನಿಜಕ್ಕೂ ಪರಿಣಾಮಕಾರಿ ಫಲಿತಾಂಶವಾಗಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದೇ ಮಾದರಿಯಲ್ಲಿ, ಕಂಡುಬರುತ್ತಿದ್ದ ಚಿಕನ್ ಗುನ್ಯಾ ಜ್ವರದ ಪ್ರಮಾಣವೂ ಶೇ.59ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ 2024ರ ಸಾಲಿನಲ್ಲಿ 2,348 ಪ್ರಕರಣಗಳು ಕಂಡುಬಂದಿದ್ದರೆ 2025ರ ನವೆಂಬರ್ ಕೊನೆವಾರದ ತನಕ 974 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.
2024ರಲ್ಲಾದ ಡೆಂಗ್ಯೂ ಪ್ರಕರಣಗಳ ಹೆಚ್ಚಳವನ್ನು ಗಂಭಿರವಾಗಿ ಪರಿಗಣಿಸಿ ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಡೆಂಗ್ಯೂವನ್ನು ಸೇರಿಸಲಾಯಿತು. ನಿಯಂತ್ರಣಕ್ಕಾಗಿ ನಿರಂತರವಾಗಿ ಅರಿವು ಕಾರ್ಯಕ್ರಮ, ಸ್ವಚ್ಚತೆ, ಉಚಿತ ಔಷಧ ಚಿಕಿತ್ಸೆಗಳ ಜತೆಗೆ ಅದರ ನಿಯಮಾವಳಿ ಪ್ರಕಾರ ಲಾರ್ವಾ ನಿಯಂತ್ರಣ ಕ್ರಮಗಳನ್ನು ಅನುಸರಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ₹2000 ತನಕ ದಂಡ ಶಿಕ್ಷೆ ವಿಧಿಸುವ ಕ್ರಮ ಜರುಗಿಸಲಾಗಿತ್ತು. ಪರಿಣಾಮ ಡೆಂಗ್ಯೂ ಜತೆಗೆ ಚಿಕನ್ ಗುನ್ಯಾ ರೋಗ ಕೂಡ ನಿಯಂತ್ರಣಕ್ಕೆ ಬರಲು ಸಾಧ್ಯವಾಯಿತು ಎಂದಿದ್ದಾರೆ.
ಈ ನಿಯಂತ್ರಣ ಕ್ರಮಕ್ಕಾಗಿ ಇಲಾಖೆ ಅಧಿಕಾರಿ- ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ, ನಾಗರಿಕರು ಅಭೂತಪೂರ್ವ ಸಹಕಾರ ನೀಡಿದ್ದರು ಎಂದು ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.
ಡೆಂಗ್ಯೂ ಪ್ರಕರಣಗಳು 2024ನೇ ಸಾಲಿನಲ್ಲಿ 31,934 ಕಂಡು ಬಂದಿದ್ದರೆ 2025ರ ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ 6,561 ಕ್ಕೆ ಇಳಿದಿದ್ದು, ಶೇಕಡವಾರು 81% ಕಡಿಮೆಯಾಗಿದೆ. ಅಲ್ಲದೆ, ಸಾವು ಸಂಭವಿಸಿಲ್ಲ. ಇದು ನಿಜಕ್ಕೂ ಪರಿಣಾಮಕಾರಿ ಫಲಿತಾಂಶವಾಗಿದೆ.
ಇದೇ ಮಾದರಿಯಲ್ಲಿ, ಕಂಡುಬರುತ್ತಿದ್ದ ಚಿಕನ್ ಗುನ್ಯಾ ಜ್ವರದ ಪ್ರಮಾಣವೂ ಶೇ.59ಕ್ಕೆ… pic.twitter.com/vwKJRNsrH9
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 30, 2025






















































