ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬಿಕ್ಕಟ್ಟು ಶಮನ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಶನಿವಾರ ಬೆಳಿಗ್ಗೆ ಒಟ್ಟಾಗಿ ಉಪಹಾರ ಸೇವಿಸಿ ಗಮನಸೆಳೆದರು. ಉಪಹಾರ ಮೂಲಕ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ತೋರಿಸಲು ಹೈಕಮಾಡ್ ನಾಯಕರು ಹೇಳಿಕೊಟ್ಟ ಸೂತ್ರವನ್ನು ಸಿಎಂ ಡಿಸಿಎಂ ಪಾಲಿಸಿದ್ದಾರೆ. ಆದರೆ ಈ ಬೆಳವಣಿಗೆ ನಾಟಕೀಯ ರೀತಿಯಲ್ಲೇ ಇತ್ತೆ ವಿನಃ ಒಗ್ಗಟ್ಟು ಪ್ರದರ್ಶನದಂತೆ ಇರಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಉಪಹಾರ ಬಳಿಕ ನಿರೀಕ್ಷೆಯಂತೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿ ಹಂಚಿಕೊಂಡರು. ನಮ್ಮೊಳಗೆ ಭಿನ್ನಾಭಿಪ್ರಾಯವೇ ಇಲ್ಲ, ಒಗ್ಗಾಟಾಗಿವೆ ಇದ್ದೇವೆ. ಸದ್ಯದ ಗೊಂದಲಗಳಿಗೆ ಪ್ರತಿಪಕ್ಷ ಹಾಗೂ ಮಾಧ್ಯಮಗಳು ಕಾರಣ ಎಂದರು.
#WATCH | Karnataka Chief Minister Siddaramaiah and Deputy CM DK Shivakumar hold a joint press conference in Bengaluru after the breakfast meeting pic.twitter.com/V9G4cY1rGT
— ANI (@ANI) November 29, 2025
‘ಸುಮಾರು ಒಂದು ತಿಂಗಳಿನಿಂದ ಅನಗತ್ಯವಾಗಿ ಗೊಂದಲಗಳು ನಿರ್ಮಾಣವಾಗಿವೆ. ಹಾಗಾಗಿ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ ಎಂದರು. ಇವತ್ತಿನ ವರೆಗೆ ಮಾತ್ರವಲ್ಲ ಮುಂದೆಯೂ ಇದೇ ತರ ಒಗ್ಗಟ್ಟಾಗಿಯೇ ಮುಂದುವರಿಯಲಿದ್ದೇವೆ’ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
#WATCH | Bengaluru: After a breakfast meeting with Deputy CM DK Shivakumar, Karnataka CM Siddaramaiah says, “Whatever decision the high command takes, both of us will obey. There are no differences between DK Shivakumar and me… They (BJP and JDS) are saying that no… pic.twitter.com/j1oCFDy5y4
— ANI (@ANI) November 29, 2025
ಹೈಕಮಾಂಡ್ ಸೂಚನೆಯಂತೆಯೇ ನಡೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂಪುಟ ಪುನಾರಚನೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕೆಲವು ಶಾಸಕರು ದೆಹಲಿಗೆ ಹೋಗಿದ್ದರು. ಸಚಿವಸ್ಥಾನ ಕೇಳಲು ಹೋಗಿದ್ದಾರೆಯೇ ಹೊರಟು ನಾಯಕತ್ವದ ವಿರುದ್ಧವಾಗಿ ಶಾಸಕರು ದೆಹಲಿಗೆ ಹೋಗಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
#WATCH | Bengaluru: After a breakfast meeting with Deputy CM DK Shivakumar, Karnataka CM Siddaramaiah says, “The unity will continue. We are together, united, and there are no differences between us.” pic.twitter.com/OIrInaFCPN
— ANI (@ANI) November 29, 2025
ಡಿಕೆ ಶಿವಕುಮಾರ್ ಮಾತನಾಡಿ. ‘ರಾಜ್ಯದ ಜನ ನಮ್ಮ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಅದರಂತೆ ನಡೆದುಕೊಂಡಿದ್ದೇವೆ’ ಎಂದು ತಿಳಿಸಿದರು. ವಿಧಾನಸಭೆ ಅಧಿವೇಶನದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿದ್ದೇನೆ ಎಂದ ಡಿಕೆಶಿ, ನಮ್ಮದು ಒಂದೇ ಗುಂಪು, ಹೈಕಮಾಂಡ್ ಗುಂಪು ಎಂದರು.
‘ನಾನು ಮತ್ತು ಸಿಎಂ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಒಮ್ಮತದಿಂದ ಆಡಳಿತ ಮಾಡಿಕೊಂಡು ಹೋಗುತ್ತೇವೆ’ ಎಂದು ಡಿಕೆ ಶಿವಕುಮಾರ್ ಹೇಳಿದರು.
#WATCH | Bengaluru: After a breakfast meeting with CM Siddaramaiah, Karnataka Deputy CM DK Shivakumar says, “…There are some big issues that the Parliament members need to raise in this (Winter) session. Whatever they (central govt) have promised on sugarcane, maize issues and… pic.twitter.com/cLyyGkvFsh
— ANI (@ANI) November 29, 2025






















































