ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಭಾರಿಸಿರಬಹುದು, ಆದರೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗಿರುವುದನ್ನು ಆ ಫಲಿತಾಂಶ ತೋರಿಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರೂ ಆದ, ಶಾಸಕ ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.
ಸಂಸದೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಅವರು, ಬಿಹಾರ ಫಲಿತಾಂಶ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಸೋಲನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಅದೇ ಸಮಯದಲ್ಲಿ ರಾಜಕೀಯ ಪಕ್ಷವಾಗಿ ಮತ್ತು ಪಕ್ಷವಾಗಿ ಗೌರವದಿಂದ ಹೇಳಿಕೊಳ್ಳುವುದರೊಂದಿಗೆ, ಬಿಜೆಪಿ ಹಲವಾರು ಅಂಶಗಳಿಗೆ ಜವಾಬ್ದಾರರಾಗಿರಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಹಾರದಲ್ಲಿ 2025 ರ ಎನ್‌ಡಿಎಯ ಗೆಲುವು ಪ್ರಭಾವಶಾಲಿಯಾಗಿದ್ದರೂ, ಫಲಿತಾಂಶವನ್ನು ಆಳವಾಗಿ ಗಮನಿಸಿದರೆ, ನರೇಂದ್ರ ಮೋದಿಗೆ ವೈಯಕ್ತಿಕವಾಗಿ ಹಿನ್ನಡೆಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ರಮೇಶ್ ಬಾಬು ಬೊಟ್ಟುಮಾಡಿದ್ದಾರೆ. 2010ರಲ್ಲಿ ಎಲ್.ಕೆ.ಅಡ್ವಾಣಿ ಇನ್ನೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದಾಗ ಬಿಹಾರದಲ್ಲಿ ಬಿಜೆಪಿ 91 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಮೋದಿ ನಾಯಕತ್ವದಲ್ಲಿ, ಪಕ್ಷವು ಅಷ್ಟೇನೂ ಹೊಂದಿಕೆಯಾಗಲಿಲ್ಲ. ಮೋದಿಯ ರಾಷ್ಟ್ರೀಯ ಬ್ರ್ಯಾಂಡ್ ಬಿಹಾರದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಬಿಹಾರ ಬಿಜೆಪಿಯ ಬೆಳವಣಿಗೆ ತನ್ನ ಮಿತ್ರಪಕ್ಷಗ ಮೇಲೆ ಹೆಚ್ಚು ಅವಲಂಬಿತವಾದಂತಿದೆ ಎಂದು ಬಣ್ಣಿಸಿದ್ದಾರೆ.
‘ಇದನ್ನು ಮೋದಿಗೆ ಹಿನ್ನಡೆ ಅಥವಾ ಕಳಪೆ ಕಾರ್ಯಕ್ಷಮತೆ ಎಂದು ಹೇಳಬಹುದು. ವಿಶೇಷವಾಗಿ ದೇಶದ ಅಧಿಕಾರ ತನ್ನ ಕೈಯಲ್ಲಿದ್ದಾಗಿಯೂ, ಬಿಹಾರದಲ್ಲಿ ಎನ್‌ಡಿಎ ಯಶಸ್ಸಿಗೆ ಪ್ರಾದೇಶಿಕ ಮಿತ್ರರಾಷ್ಟ್ರಗಳು ಅತ್ಯಗತ್ಯವಾಗಿವೆ ಎಂದು ವಿಮರ್ಶಕರು ವಾದಿಸಬಹುದು. ಮೋದಿ ಅವರ ರಾಷ್ಟ್ರೀಯ ಜನಪ್ರಿಯತೆಯು ಪ್ರತಿಯೊಂದು ನಿರ್ಣಾಯಕ ರಾಜ್ಯದಲ್ಲೂ ಬಿಜೆಪಿಗೆ ರಾಜ್ಯಮಟ್ಟದ ಪ್ರಾಬಲ್ಯವನ್ನು ನೀಡುತ್ತದೆ ಎಂಬುದು ಸುಳ್ಳು ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.
*We are accepting Congress Party defeat in Bihar for various factors. At the same time as a political party and claiming as party with deference, BJP is answerable to the several points!*
While the NDA’s 2025 landslide in Bihar is impressive, a closer look reveals a setback for… pic.twitter.com/YZk9tLh9ih
— Ramesh Babu (@RameshBabuKPCC) November 15, 2025
‘2010 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 91 ಸ್ಥಾನಗಳನ್ನು ಗೆದ್ದಿತ್ತು. 2025ರ ಚುನಾವಣೆಯಲ್ಲಿ, ಬಿಜೆಪಿ 89 ಸ್ಥಾನಗಳನ್ನು ಗೆದ್ದಿದೆ.15 ವರ್ಷಗಳ ಅವಧಿಯಲ್ಲಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಬಿಹಾರದಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಅರ್ಥಪೂರ್ಣವಾಗಿ ಬೆಳೆದಿಲ್ಲ, ವಾಸ್ತವವಾಗಿ ಇದು 2010 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಮೋದಿ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಗಾಧವಾಗಿ ವಿಸ್ತರಿಸಿರುವ ಪಕ್ಷಕ್ಕೆ ಅದು ಗಮನಾರ್ಹವಾಗಿದೆ’ ಎಂದು ಅವರು ಗಮನಸೆಳೆದಿದ್ದಾರೆ.
‘2010 ರಲ್ಲಿ ಎಲ್.ಕೆ. ಅಡ್ವಾಣಿ ಅವರ ಪಾತ್ರವು ಬಿಜೆಪಿಯಲ್ಲಿ ರಾಷ್ಟ್ರೀಯ ಮಟ್ಟದ ಪ್ರಭಾವಶಾಲಿ ನಾಯಕತ್ವವನ್ನು ಬಿಂಭಿಸಿತ್ತು. 2010 ರ ಸುಮಾರಿಗೆ, ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿದ್ದರು. ಇದೀಗ 2025ರಲ್ಲಿ ನರೇಂದ್ರ ಮೋದಿ ಪ್ರಧಾನಿ ಮತ್ತು ವಾಸ್ತವಿಕ ರಾಷ್ಟ್ರೀಯ ನಾಯಕರಾಗಿ ಬಿಜೆಪಿಯ ಕೇಂದ್ರ ವ್ಯಕ್ತಿ. ಹಾಗಾಗಿ ರಾಜ್ಯ ಚುನಾವಣೆಯಲ್ಲಿ ಬಲವಾದ ‘ಮೋದಿ ಅಲೆ’ಯನ್ನು ನಿರೀಕ್ಷಿಸಬಹುದು, ಆದರೆ ಫಲಿತಾಂಶನ್ನು ಗಮನಿಸಿದಾಗ ಬಿಹಾರ ವಿಧಾನಸಭಾ ಸಾಧನೆಯಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟ ಗೆದ್ದರೂ ಕೂಡಾ ಮೋದಿ ನೇತೃತ್ವದ ಬಿಜೆಪಿ ಸಾಧನೆಯು ಹಿಂದಿನ ಅಡ್ವಾಣಿ ಸಾಧನೆಗಿಂತ ತೀರಾ ಅಲ್ಪ. ಕಳೆದ ಒಂದೂವರೆ ದಶಕದಲ್ಲಿ ಬಿಹಾರದಲ್ಲಿ ಬಿಜೆಪಿಯ ನೆಲೆಯನ್ನು ಗಮನಾರ್ಹವಾಗಿ ಬಲಪಡಿಸಲು ಮೊದಿಯಿಂದ ಸಾಧ್ಯವಾಗಿಲ್ಲ. ಈ ಕಹಿ ಸತ್ಯ ಸತ್ಯವನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ?’ ಎಂದು ರಮೇಶ್ ಬಾಬು ಮಾರ್ಮಿಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಬಹುಶ: ಈ ವಿಷಯವು ಬಿಜೆಪಿ-ಆರೆಸ್ಸೆಸ್ ವಲಯದಲ್ಲಿ ಆಳವಾದ ಚರ್ಚೆಗೂ ಎಡೆಮಾಡಿಕೊಡಬಹುದು.























































