ವಾಷಿಂಗ್ಟನ್: ಅಮೆರಿಕಾದಲ್ಲೂ ದೀಪಾವಳಿ ಸಡಗರ ಆವರಿಸಿದೆ. ಅಂಮೆರಿಕಾದಲ್ಲಿರುವ ಭಾರತೀಯರು ತಮ್ಮ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಅಮೆರಿಕಾದ ಶಕ್ತಿಕೇಂದ್ರ ಶ್ವೇತಭವನ ಕೂಡಾ ವಿಶೇಷ ಸಂಭ್ರಮಕ್ಕೆ ಸಾಕ್ಷಿಯಾಯಿತು. ಅನಿವಾಸಿ ಭಾರತೀಯರೊಂದಿಗೆ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೀಪಾವಳಿ ಆಚರಿಸಿ ಗಮನಸೆಳೆದರು.
Deeply honoured to join President Donald J. Trump @realDonaldTrump @POTUS at the White House today to celebrate Diwali. Wished him on behalf of Prime Minister @narendramodi a Happy Diwali and thanked him for this beautiful gesture.
Warm Diwali greetings to all celebrating,… pic.twitter.com/G3jAvc0hpO
— Amb Vinay Mohan Kwatra (@AmbVMKwatra) October 22, 2025
ದೀಪಾವಳಿ ಹಿನ್ನೆಲೆ ಅಮೆರಿಕಾದ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯಾಂಡಲ್‌ನಿಂದ ದೀಪ ಹಚ್ಚಿ ದೀಪ ಬೆಳಗಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಭಾರತೀಯರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ ಡೊನಾಲ್ಡ್ ಟ್ರಂಪ್, ತಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಾವು ವಾಣಿಜ್ಯ ಸಹಕಾರ ಬಗ್ಗೆ ಮಾತನಾಡಿದೆವು. ಆ ಬಗ್ಗೆ ಅವರು ಬಹಳ ಆಸಕ್ತಿ ಹೊಂದಿದ್ದಾರೆ ಎಂದರು. ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ನನಗೆ ಒಬ್ಬ ಉತ್ತಮ ಸ್ನೇಹಿತರಾಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಇದೇ ವೇಳೆ ಹೇಳಿದರು.