ಬೆಂಗಳೂರು: ಮಳೆ ಹಾನಿ ಬೆಳೆ ನಷ್ಟ ಪರಿಹಾರ ಹೆಚ್ಚಿಸುವ ಭರವಸೆ ಮುಖ್ಯಮಂತ್ರಿ ಅವರಿಂದ ಸಿಕ್ಕಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ರಾಜ್ಯದ ರೈತರ ನಿಯೋಗ ಭೇಟಿ ಮಾಡಿತು. ರಾಜ್ಯಾದ್ಯಂತ ಇರುವ 38,000 ಕೆರೆಗಳ ಊಳು ತೆಗೆಸಿ ರೈತರ ಜಮೀನಿಗೆ ಸರಬರಾಜು ಮಾಡಲು ಯೋಜನೆಯ ರೂಪಿಸಿ ಅನುದಾನ ನಿಗದಿ ಮಾಡಬೇಕು ಎಂದು ರೈತರ ನಿಯೋಗ ಆಗ್ರಹಿಸಿತು.
2025- 26ರಲ್ಲಿ ಕಬ್ಬಿನ ಉತ್ಪನ್ನ ವೆಚ್ಚ ಏರಿಕೆಯಾಗಿದ್ದು ಎಫ್‌ಆರ್‌ಪಿ ದರ ಸಮ0ಜಸವಾಗಿಲ್ಲ. ಕಬ್ಬಿನ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ (ಎಸ ಎ ಪಿ) ನಿಗದಿ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ನೇತೃತ್ವದ ರೈತರ ನಿಯೋಗ ಸಿಎಂಗೆ ಮನವಿ ಮಾಡಿತು.
2023-24ನೇ ಸಾಲಿನಲ್ಲಿ ಕಬ್ಬಿಗೆ ಹೆಚ್ಚುರಿಯಾಗಿ ನಿಗದಿಪಡಿಸಿರುವ ಟನ್ 150 ರೂ ಬಾಕಿ ಹಣ ರೈತರಿಗೆ ಕೂಡಿಸಬೇಕು. ರಾಜ್ಯಾದ್ಯಂತ ಅತಿವೃಷ್ಟಿ ಮಳೆ ಹಾನಿ ಪರಿಹಾರವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಮಳೆ ಆಶ್ರಯ ಎಕ್ಕರೆಗೆ 25,000 ನೀರಾವರಿ 40,000 ರೈತರಿಗೆ ವಿತರಿಸುವಂತೆ ಸೂಚನೆ ನೀಡಬೇಕು. ಕೆಐಡಿಬಿ ರೈತರ ಜಮೀನು ವಶಪಡಿಸಿಕೊಂಡು 25 ವರ್ಷವಾದರೂ ಯಾವುದೇ ಉದ್ದೇಶಕ್ಕೆ ಬಳಸದೆ ಖಾಲಿ ಬಿಟ್ಟಿರುವ ಜಮೀನುಗಳನ್ನು ರೈತರಿಗೆ ವಾಪಸ್ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಭತ್ತ. ರಾಗಿ. ಜೋಳ. ಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸುವ ಖಾತ್ರಿ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ ನಿರ್ಧಾರ ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಜೊತೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೂ ಖರೀದಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

























































