ನವ ದೆಹಲಿ: ಭಾರತೀಯ ಅಂಚೆ ಇಲಾಖೆ ತನ್ನ ನೋಂದಾಯಿತ ಅಂಚೆ ಸೇವೆಯನ್ನು ಸ್ಥಗಿತಗೊಳಿಸಲಿದೆ. 50 ವರ್ಷಗಳ ಮಹತ್ವದ ಸೇವೆಯನ್ನು ಅಂತ್ಯಗೊಳಿಸಲಿದೆ.
ಸೆಪ್ಟೆಂಬರ್ 1, 2025 ರಿಂದ, ಕಾರ್ಯಾಚರಣೆಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಅಂಚೆ ಇಲಾಖೆ ತನ್ನ ರಿಜಿಸ್ಟರ್ಡ್ ಪೋಸ್ಟನ್ನು ಸ್ಪೀಡ್ ಪೋಸ್ಟ್ನೊಂದಿಗೆ ವಿಲೀನಗೊಳಿಸಲಿದೆ.
ಉದ್ಯೋಗಾವಕಾಶಗಳು, ಕಾನೂನು ನೋಟಿಸ್ಗಳು ಮತ್ತು ಸರ್ಕಾರಿ ಪತ್ರವ್ಯವಹಾರಗಳಂತಹ ಪ್ರಮುಖ ದಾಖಲೆಗಳನ್ನು ತಲುಪಿಸಲು ನೋಂದಾಯಿತ ಅಂಚೆ ಸೇವೆಯನ್ನು ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸೇವೆ ಕಡಿಮೆ ಬಳಕೆಯಾಗುತ್ತಿದ್ದು, ಸ್ಪೀಡ್ ಪೋಸ್ಟ್ ಜನಪ್ರಿಯವಾಗಿದೆ. ಹಾಗಾಗಿ ಇನ್ನು ಮುಂದೆ ರಿಜಿಸ್ಟರ್ಡ್ ಪೋಸ್ಟನ್ನು ಸ್ಪೀಡ್ ಪೋಸ್ಟ್ನೊಂದಿಗೆ ವಿಲೀನಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.