ಬೆಂಗಳೂರು: ಹಿಂದೂ ಮಠಗಳನ್ನು ಟಾರ್ಗೆಟ್ ಮಾಡಿ ಕಮಿಷನ್ ಗೆ ಡಿಮ್ಯಾಂಡ್ ಇಟ್ಟಿರುವ ಆರೋಪದಲ್ಲಿ ಸಿಲುಕಿರುವ ಸಚಿವ ಶಿವರಾಜ್ ತಂಗಡಗಿ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ.
ಇಷ್ಡುದಿನ ಗುತ್ತಿಗೆದಾರರು, ಅಧಿಕಾರಿಗಳಿಂದ ಕಲೆಕ್ಷನ್, ಕಮಿಷನ್ ಪಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಹಿಂದೂ ಮಠಗಳನ್ನು ಟಾರ್ಗೆಟ್ ಮಾಡಿ ಕಮಿಷನ್ ಗೆ ಡಿಮ್ಯಾಂಡ್ ಇಟ್ಟು ಸಿಕ್ಕಿಬಿದ್ದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.
ನೆಲಮಂಗಲದ ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ಅನುದಾನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಸಚಿವ ಶಿವರಾಜ್ ತಂಗಡಿಗೆ 25% ಕಮಿಷನ್ ಕೇಳಿದ್ದಾರೆಂದು ಪೂರ್ಣಾನಂದಪೂರಿ ಸ್ವಾಮೀಜಿ ಭ್ರಷ್ಟ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದಿರುವ ಬಿಜೆಪಿ, ‘ಮಠಗಳು ಬಳಿ ಕಮಿಷನ್ ಕೇಳುವ ನಿಮ್ಮ ಸರ್ಕಾರಕ್ಕೆ ಮಸೀದಿಗಳಿಂದಲೂ ಕಮಿಷನ್ ಕೇಳುವ ತಾಕತ್ತು ಇದೆಯಾ?’ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.
ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇಷ್ಡುದಿನ ಗುತ್ತಿಗೆದಾರರು, ಅಧಿಕಾರಿಗಳಿಂದ ಕಲೆಕ್ಷನ್, ಕಮಿಷನ್ ಪಡೆಯುತ್ತಿದ್ದ @INCKarnataka ಸರ್ಕಾರ ಇದೀಗ ಹಿಂದೂ ಮಠಗಳನ್ನು ಟಾರ್ಗೆಟ್ ಮಾಡಿ ಕಮಿಷನ್ ಗೆ ಡಿಮ್ಯಾಂಡ್ ಇಟ್ಟು ಸಿಕ್ಕಿಬಿದ್ದಿದೆ.
ನೆಲಮಂಗಲದ ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ಅನುದಾನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಸಚಿವ ಶಿವರಾಜ್ ತಂಗಡಿಗೆ 25% ಕಮಿಷನ್… pic.twitter.com/YWiwxeAJ9i
— BJP Karnataka (@BJP4Karnataka) July 5, 2025