ಬೆಂಗಳೂರು: ಬೆಂಗಳೂರು ವಿಂಹಜನೆಯ ಸರ್ಕಾರದ ಪ್ರಸ್ತಾಪಕ್ಕೆ ಪ್ರತಿಪಕ್ಷ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವಿಭಜನೆ ಬೇಡ, ಆಡಳಿತ ವಿಕೇಂದ್ರೀಕರಣ ಮಾಡಿ ಎಂದು ಬಿಜೆಪಿ ನಾಯಕರು ಸಲಹೆ ಮುಂದಿಟ್ಟಿದ್ದಾರೆ.
ಬೆಂಗಳೂರನ್ನು ವಿಭಜನೆ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ರಾಜಕೀಯ ವಿಕೇಂದ್ರೀಕರಣದ ಬದಲು ಆಡಳಿತ ವಿಕೇಂದ್ರೀಕರಣ ಮಾಡಿ ಎಂದು ಶಾಸಕರು ಮನವಿ ಮಾಡಿದ್ದಾರೆ. ಈ ಕುರಿತಂತೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಾದ ಅಶ್ವಥನಾರಾಯಣ, ಭೈರತಿ ಬಸವರಾಜ್, ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್ ಅವರ ಹೇಳಿಕೆ ಗಮನಸೆಳೆಯಿತು.
ಬೆಂಗಳೂರನ್ನು ವಿಭಜನೆ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ರಾಜಕೀಯ ವಿಕೇಂದ್ರೀಕರಣದ ಬದಲು ಆಡಳಿತ ವಿಕೇಂದ್ರೀಕರಣ ಮಾಡಿ.
ಕೆಂಪೇಗೌಡರು ಕಟ್ಟಿದ ನಗರವನ್ನು ವಿಭಜಿಸುವುದು ಸರಿಯಲ್ಲ. ಅಧಿಕಾರದ ವಿಕೇಂದ್ರೀಕರಣಕ್ಕೆ ಸರ್ಕಾರ ಆದ್ಯತೆ ನೀಡಲಿ.
ಈಗಾಗಲೇ ನೂರಾರು ಪ್ರದೇಶದಲ್ಲಿ ನೀರಿನ ಅಭಾವ ಕಾಡುತ್ತಿದೆ. ಬೆಂಗಳೂರನ್ನು ವಿಭಜಿಸಿ… pic.twitter.com/yD45LeCDvn
— BJP Karnataka (@BJP4Karnataka) March 10, 2025
ಕೆಂಪೇಗೌಡರು ಕಟ್ಟಿದ ನಗರವನ್ನು ವಿಭಜಿಸುವುದು ಸರಿಯಲ್ಲ. ಅಧಿಕಾರದ ವಿಕೇಂದ್ರೀಕರಣಕ್ಕೆ ಸರ್ಕಾರ ಆದ್ಯತೆ ನೀಡಲಿ ಎಂದ ಶಾಸಕರು, ಈಗಾಗಲೇ ನೂರಾರು ಪ್ರದೇಶದಲ್ಲಿ ನೀರಿನ ಅಭಾವ ಕಾಡುತ್ತಿದೆ. ಬೆಂಗಳೂರನ್ನು ವಿಭಜಿಸಿ ಮಹಾನಗರ ಪಾಲಿಕೆಗಳ ನಡುವೆ ಘರ್ಷಣೆ ಸೃಷ್ಟಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ವಿಪಕ್ಷಗಳ ಶಾಸಕರಿಗೆ ಅನುದಾನ ತಾರತಮ್ಯ ನಡೆಯುತ್ತಿದೆ. ಇನ್ನು ಬಹು ಮಹಾನಗರ ಪಾಲಿಕೆಗಳ ಸೃಷ್ಟಿಯಿಂದಾಗಿ ಅನುದಾನದ ವಿಚಾರದಲ್ಲಿ ಮತ್ತಷ್ಟು ಗೊಂದಲಗಳು ಮೂಡಲಿದೆ ಎಂದು ಸರ್ಕಾರದ ಗಮನಸೆಳೆದರು.
ಕೆಂಪೇಗೌಡರು ಕಟ್ಟಿದ ನಾಡನ್ನು ಛಿದ್ರಗೊಳಿಸುವ ಕಾರ್ಯಕ್ಕೆ ಕಾಂಗ್ರೆಸ್ ಇಳಿದಿರುವುದು ಈ ನಾಡಿನ ದುರಂತ. ಬೆಂಗಳೂರು ಒಂದಾಗಿರಬೇಕು ಎಂದು ಕೆಂಪೇಗೌಡರು ಕನಸು ಕಂಡಿದ್ದರೆ, ಬೆಂಗಳೂರನ್ನು ಕಾಂಗ್ರೆಸ್ ವಿಭಜನೆಗೊಳಿಸುತ್ತಿದೆ.
– ಶ್ರೀ @RAshokaBJP , ಪ್ರತಿಪಕ್ಷ ನಾಯಕರು#CongressFailsKarnataka pic.twitter.com/GjgjUO1qCn
— BJP Karnataka (@BJP4Karnataka) March 10, 2025