ಬೈರುತ್: ಸಿರಿಯಾದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಷರ್ ಅಸ್ಸಾದ್ ಬೆಂಬಲಿಗರ ನಡುವಿನ ಕಾಳಗದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಎರಡು ದಿನಗಳ ಸಂಘರ್ಷಗಳು ಪರಸ್ಪರ ಸೇಡಿನ ಹತ್ಯೆಗಳಿಗೆ ಸಾಕ್ಷಿಯಾಗುತ್ತಿವೆ. ಈ ಸಂಘರ್ಷದಲ್ಲಿ ಸಂಖ್ಯೆ ಸಾವಿರಕ್ಕೂ ಹೆಚ್ಚು ನಾಗರಿಕರ ಮಾರಣಹೋಮವಾಗಿದೆ ಎನ್ನಲಾಗುತ್ತಿದೆ.
ಸುಮಾರು 745 ನಾಗರಿಕರು ಸಾವನ್ನಪ್ಪಿದರೆ, 125 ಮಂದಿ ಭದ್ರತಾ ಪಡೆ ಯೋಧರು ಹಾಗೂ ಸುಮಾರು 148 ಮಂದಿ ದಂಗೆಕೋರರು ಬಲಿಯಾಗಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ. ಅಸ್ಸಾದ್ ಅವರ ಪದಚ್ಯುತಿ ನಂತರ ಬೇಬಲಿಗರು ದಂಗೆ ಎದ್ದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸೇನಾಪಡೆಗಳು ಹರಸಾಹಸ ನಡೆಸುತ್ತಿವೆ.