ಬೆಂಗಳೂರು: ‘ಮೂಡಾ ಸೈಟ್ ಹಗರಣ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಪಕ್ಷ ಬಿಜೆಪಿ ಸಮರ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಅಂಟಿಕೊಂಡಿರುವ ಸೈಟ್ ಅಕ್ರಮ ಕುರಿತು ದಿನಕ್ಕೊಂದು ಮಾಹಿತಿ ಬಯಲು ಮಾಡುತ್ತಿರುವ ಬಿಜೆಪಿ, ಇದೀಗ ಆ ಆಸ್ತಿಯ ಮೂಲದ ಬಗ್ಗೆ ಕೆದಕಿದೆ. ಆಸ್ತಿ ಕುರಿತು ಗೊತ್ತೇ ಇಲ್ಲ ಎಂದು ಮೈಲಾರಯ್ಯ ಕುಟುಂಬ ಹೇಳಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
ತಮಗೇ ತಾವೇ ಕ್ಲೀನ್ ಚಿಟ್ ಕೊಟ್ಟುಕೊಳ್ಳುವ ಭ್ರಷ್ಟ ಯಾರಾದರೂ ಇದ್ದರೆ ಅದು ನಮ್ಮ ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಒಬ್ಬರೇ! ಎಂದಿರುವ ಬಿಜೆಪಿ, ಮಾಧ್ಯಮಗಳಲ್ಲಿ ಮೈಲಾರಯ್ಯ ಕುಟುಂಬದವರೇ ಆಸ್ತಿಯ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ದೇವರಾಜು ಹಾಗೂ ಮೈಲಾರಯ್ಯ ಕುಟುಂಬಕ್ಕೆ ಸಂಪರ್ಕವೇ ಇಲ್ಲ. ಅದೆಷ್ಟೋ ವರ್ಷಗಳು ಆಗಿವೆ ಎಂದಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.
64 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಮಾರಿದವರು ಇಂದು ಸೋರುವ ಮನೆಯಲ್ಲಿ ವಾಸವಾಗಿರುವುದು ಏಕೆ? ನಿಮಗೆ ಆಸ್ತಿ ಕೊಟ್ಟ ದೇವರಾಜು ಅವರು ಎಲ್ಲಿದ್ದಾರೆ? ವಂಶವೃಕ್ಷಕ್ಕೆ ಮಾಡಿರುವ ಸಹಿ ಅವರದೇ ಎನ್ನುವುದಕ್ಕೆ ಸಾಕ್ಷಿ ಎನು? ಮೂಲ ದಾಖಲೆ ತೆಗೆದ ಮೈಸೂರಿನ RTI ಕಾರ್ಯಕರ್ತನ ಮೇಲೆ ಕೇಸ್ ಹಾಕಿಸಿದ್ದು ಯಾಕೆ? ಕುಂಕುಮ ರೂಪದಲ್ಲಿ ದಾನ ನೀಡಿದ ನಿಮ್ಮ ಸಂಬಂಧಿ ಜಮೀನು ಖರೀದಿಸುವಾಗ ಇದ್ದ ಹಣದ ಮೂಲ ಯಾವುದು? ಹಣ ಕೊಟ್ಟು ಖರೀದಿ ಮಾಡಿರುವುದಕ್ಕೆ ದಾಖಲೆಗಳೇನು? ಇಷ್ಟೆಲ್ಲಾ ಆದಮೇಲೂ ನೀವು ನಿಷ್ಠರೇ ಆಗಿದ್ದರೆ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಗೆ ಚರ್ಚಿಸಲು ಅವಕಾಶ ಕೊಡದೆ ಪಲಾಯನ ಮಾಡಿದ್ದು ಏಕೆ? ಎಂದು ಬಿಜೆಪಿ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿ ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಮುಂದಿಟ್ಟಿದೆ.
‘ನೀವು ನಿಷ್ಠರೇ ಆಗಿದ್ದರೆ ಮುಡಾ ಪ್ರಕರಣವನ್ನು ತನಿಖೆಗೆ ವಹಿಸಿ ರಾಜೀನಾಮೆ ಕೊಟ್ಟು ಸಾಬೀತುಪಡಿಸಿ’ ಎಂದು ಬಿಜೆಪಿ ಸವಾಲು ಹಾಕಿದೆ.
ತಮಗೇ ತಾವೇ ಕ್ಲೀನ್ ಚಿಟ್ ಕೊಟ್ಟುಕೊಳ್ಳುವ ಭ್ರಷ್ಟ ಯಾರಾದರೂ ಇದ್ದರೆ ಅದು ನಮ್ಮ ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಒಬ್ಬರೇ!
ಮಾಧ್ಯಮಗಳಲ್ಲಿ ಮೈಲಾರಯ್ಯ ಕುಟುಂಬದವರೇ ಆಸ್ತಿಯ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.
ದೇವರಾಜು ಹಾಗೂ ಮೈಲಾರಯ್ಯ ಕುಟುಂಬಕ್ಕೆ ಸಂಪರ್ಕವೇ ಇಲ್ಲ. ಅದೆಷ್ಟೋ ವರ್ಷಗಳು ಆಗಿವೆ… https://t.co/WNY1CG81my
— BJP Karnataka (@BJP4Karnataka) July 26, 2024































































