ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಜನಪ್ರಿಯವಾಗಿರುವ ನಟ ರಕ್ಷಿತ್ ಶೆಟ್ಟಿಗೆ ಇದೀಗ ಹಾಡಿನ ಕಿರಿಕ್ನಿಂದಾಗಿ ಸಂಕಷ್ಟ ಎದುರಾಗಿದೆ. ಸಿನಿಮಾ ಹಾಡೊಂದರ ಕಾಪಿ ರೈಟ್ ಉಲ್ಲಂಘನೆ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಾಗಿದೆ.
ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಸರದಿ. ಈ ಚಿತ್ರದ ʻಗಾಳಿಮಾತುʼ ಹಾಗೂ ʻನ್ಯಾಯ ಎಲ್ಲಿದೆʼ ಎಂಬ ಹಾಡನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆಂದು ನವೀನ್ ಎಂಬವರು ಆರೋಪ ಮಾಡಿದ್ದಾರೆ. ಈ ಕುರಿತ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸರು ನಟ ರಕ್ಷಿತ್ ಶೆಟ್ಟಿ ಮೇಲೆ ದೂರು ದಾಖಲಿಸಿದ್ದಾರೆ.
2016ರಲ್ಲಿ ತೆರೆಗೆ ಬಂದಿದ್ದ ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ ಸಿನಿಮಾ ಕೂಡಾ ‘ಕಾಪಿರೈಟ್’ ವಿಚಾರವಾಗಿ ವಿವಾದದಲ್ಲಿ ಸಿಲುಕಿತ್ತು. ಇದೀಗ ಅವರದ್ದೇ ಹೊಸ ಸಿನಿಮಾ ‘ಬ್ಯಾಚುಲರ್ ಪಾರ್ಟಿ’ ಕೂಡಾ ಕಿರಿಕ್ ಮಾದರಿಯ ವಿವಾದದಲ್ಲಿ ಸಿಲುಕಿದೆ.