ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ‘ಭೈರವನ ಕೊನೆ ಪಾಠʼ ಚಿತ್ರದ ಫಸ್ಟ್ ಲುಕ್ ಅನಾವರಣವಾಗಿದೆ.
ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾದ ಟೈಟಲ್ ಇತ್ತೀಚೆಗಷ್ಟೇ ರಿವೀಲ್ ಆಗಿತ್ತು. ಇದೀಗ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು ಸಿನಿಲೋಕದಲ್ಲಿ ಕುತೂಹಲ ಉಂಟಾಗಿದೆ. ವಯಸ್ಸಾದ ವ್ಯಕ್ತಿಯ ಲುಕ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ವೈಶಾಖ್ ಗೌಡ ಅವರ “ವಿಜೆ ಫಿಲಂಸ್’ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಕನ್ನಡ ಮಾತ್ರವಲ್ಲ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ ಎನ್ಬಲಾಗಿದೆ.
Bhairava is here!!! #Shivanna ❤️#BhairavanaKonePaaTa #BKP #VJFilms pic.twitter.com/7EJGCSiSJf
— Hemanth M Rao (@hemanthrao11) July 8, 2024