ವಿಜಯಪುರ: ಬಬಲೇಶ್ವರ ಸಮೀಪದ ಕೃಷ್ಣಾನಗರದ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬಾಯ್ಲರ್ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಕಳೆದ ವರ್ಷ ಬಾಯ್ಲರ್ ಸ್ಪೋಟಗೊಂಡು ಕಾರ್ಮಿಕನೊಬ್ಬ ಜೀವಕಳೆದುಕೊಂಡಿದ್ದ. ಇದೀಗ ಅದೇ ಕಾರ್ಖಾನೆಯಲ್ಲಿ ಮತ್ತೊಮ್ಮೆ ಅಂತಹುದೇ ಘಟನೆ ಸಂಭವಿಸಿದೆ.
ಭಾನುವಾರ ನಸುಕಿನ ಜಾವ ಬಾಯ್ಲರ್ ಸ್ಫೋಟಗೊಂಡಿದ್ದು ಆ ಸಂದರ್ಭದಲ್ಲಿ ಕಾರ್ಮಿಕರು ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಪ್ರಾಣಕ್ಕೆ ಸಂಚಕಾರ ಉಂಟಗಿಲ್ಲ ಎನ್ಬಲಾಗಿದೆ.






















































