ವಿಜಯಪುರ: ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ನೀರುಪಾಲಾಗಿರುವ ಐವರ ಪೈಕಿ ಮೂವರ ಶವ ಪತ್ತೆಯಾಗಿವೆ.
ಬಳೂತಿ ಜಾಕ್ವೆಲ್ ಬಳಿಯ ಕೃಷ್ಣ ನದಿ ತಟದಲ್ಲಿ ಮಂಗಳವಾರ ಎಂಟು ಜನರು ಇಸ್ಪೀಟ್ ಆಟವಾಡುತ್ತಿದ್ದಾಗ ಪೊಲೀಸರ ದಾಳಿ ಭೀತಿಯಿಂದ ತೆಪ್ಪದ ನದಿ ದಾಟಿ ಪರಾರಿಯಾಗಲು ಯತ್ನಿಸಿದ್ದರು. ನದಿ ದಾಟುತ್ತಿದ್ದಾಗ ಬಿರುಗಾಳಿ ಹೊಡೆತಕ್ಕೆ ಸಿಲುಕಿ ತೆಪ್ಪಮಗುಚಿ ಬಿದ್ದಿದ್ದು ಐವರು ನೀರುಪಾಲಾಗಿದ್ದರು. ಈ ಪೈಕಿ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ್ ಎಂಬವರ ಮೃತದೇಹ ಬುಧವಾರ ಸಿಕ್ಕಿದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರುಪಾಲಾಗಿರುವ ಇನ್ನಿಬ್ಬರಿಗಾಗಿ ಅಗ್ನಿಶಾಮಕ ದಳ, ಪೊಲೀಸರಿಂದ ಶೋಧಕಾರ್ಯ ನಡೆದಿದೆ.






















































