ನಳಂದ: ಬಿಹಾರದ ರಾಜ್ಗೀರ್ನಲ್ಲಿ ಇತಿಹಾಸ ಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯ ಮರುಜೀವ ಪಡೆದಿದೆ. ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಜ್ಞಾನಾರ್ಜನೆಗೆ ಮುಕ್ತಗೊಳಿಸಿದರು.
A memorable mix of history and education. Nalanda is truly special. Here are today’s highlights. pic.twitter.com/J17pxCwUD1
— Narendra Modi (@narendramodi) June 19, 2024
ಭಾರತದ ಇತಿಹಾಸದಲ್ಲಿ ಮೇರು ಪಂಕ್ತಿಯಲ್ಲಿದ್ದ ನಳಂದ ವಿಶ್ವ ವಿದ್ಯಾಲಯ ಪರಕೀಯರ ದಾಳಿಗೆ ತುತ್ತಾಗಿ ನಶಿಸಿಹೋಗಿತ್ತು. ಈ ಶಿಕ್ಷಣ ಸಂಸ್ಥೆಯನ್ನು 2010 ರಲ್ಲಿ ನಳಂದಾ ವಿಶ್ವವಿದ್ಯಾನಿಲಯ ಕಾಯ್ದೆಯ ಮೂಲಕ ಮರು ಸ್ಥಾಪಿಸಲಾಯಿತು.
ಬುಧವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಹತ್ವಾಕಾಂಕ್ಷೆಯ ವಿಶ್ವವಿದ್ಯಾಲಯದ ನೂತನ ಕ್ಯಾಂಪಸನ್ನುಉದ್ಘಾಟಿಸಿ ದೇಶದ ಗಮನಸೆಳೆದರು. ಬಿಹಾರ ರಾಜ್ಯಪಾಲ ರಾಜೇಂದ್ರ ವಿ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್ ಜೈಶಂಕರ್ ಸಹಿತ ಗಣ್ಯರನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
It’s a very special day for our education sector. At around 10:30 AM today, the new campus of the Nalanda University would be inaugurated at Rajgir. Nalanda has a strong connect with our glorious past. This university will surely go a long way in catering to the educational needs… pic.twitter.com/sJh6cndEve
— Narendra Modi (@narendramodi) June 19, 2024