ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ವಿವಾಹ ಸಿನಿಲೋಕದ ಗಮನಸೆಳೆದಿದೆ. ಚೆನ್ನೈನಲ್ಲಿರುವ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮೆಹಂದಿ ಶಸ್ತ್ರ ನಡೆದಿದ್ದು, ಜೂನ್ 10ರಂದು ವಿವಾಹ ಸಮಾರಂಭ ನೆರವೇರಿದೆ.
View this post on Instagram
ಐಶ್ವರ್ಯಾ ಸರ್ಜಾ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಉಮಾಪತಿ ರಾಮಯ್ಯ ಅವ್ರು ತಮಿಳಿನ ಹಿರಿಯ ನಟ ತಂಬಿ ರಾಮಯ್ಯ ಅವರ ಪುತ್ರ. ತಮ್ಮ ಮದುವೆಯ ಫೋಟೋಗಳನ್ನು ಐಶ್ವರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೂನ್ 14ರಂದು ನವ ಜೋಡಿಯ ಆರತಕ್ಷತೆ ಸಮಾರಂಭ ನಡೆಯಲಿದ್ದು, ಹಲವು ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ.