ಪ್ಯಾರಿಸ್: ಪ್ಯಾರಿಸ್ನ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಶನಿವಾರ ನಡೆದ ಫ್ರೆಂಚ್ ಓಪನ್ ಟೆನಿಸ್ 2024 ಟೂರ್ನಿಯ ಮಹಿಳಾ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ತಾರೆ ಇಗಾ ಶ್ವಿಯಾಮ್ಟೆಕ್ ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿ ಮೂರನೇ ಫ್ರೆಂಚ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡ ದಾಖಲೆಯನ್ನು ನಿರ್ಮಿಸಿದ್ದಾರೆ.
ಶನಿವಾರದ ಫೈನಲ್ ಪಂದ್ಯದಲ್ಲಿ ಪೊಲಾಂಡ್ನ ಇಗಾ ಶ್ವಿಯಾಮ್ಟೆಕ್ ಅವರು ಇಟಲಿಯ ಜಾಸ್ಮಿನ್ ಪಾವೊಲಿನಿ ವಿರುದ್ದ ಸೆಣಸಾಡಿ ದಿಗ್ವಿಜು ಸಾಧಿಸಿದ್ದಾರೆ.
ಇಗಾ ಶ್ವಿಯಾಮ್ಟೆಕ್ ನಾಲ್ಕನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. 2020 ರಲ್ಲಿ ಮೊದಲ ಬಾರಿ ಗೆದ್ದಿದ್ದ ಇಗಾ, 2022, 2023 ರಲ್ಲಿ ಚಾಂಪಿಯನ್ ಆಗಿದ್ದರು. ಇದೀಗ 2024 ರಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.