ಚಿತ್ರದುರ್ಗ: ದಿಢೀರ್ ಕರೆಂಟ್ ಕಟ್ ಆಗಿದ್ದರಿಂದಾಗಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರು ಮೊಬೈಲ್ ಫ್ಲಾಶ್ ಲೈಟ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿತ್ತು. ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ವಿದ್ಯುತ್ ದೀಪ ಇಲ್ಲದೆ ವೈದ್ಯರು ಕ್ಯಾಂಡಲ್ ಹಚ್ಚಿ ಅಥವಾ ಮೊಬೈಲ್ ಫ್ಲಾಶ್ ಲೈಟ್ ಬಳಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವ್ಯವಸ್ಥೆಯಿಂದಾಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿತ್ಯ ಪರದಾಡುವಂತಾಗಿದೆ.
ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ @INCKarnataka ದ ಉಡುಗೊರೆ!@siddaramaiah ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ.
ಖಜಾನೆ ಖಾಲಿ, ವಿದ್ಯುತ್ ಖಾಲಿ !
ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!#CongressFailsKarnataka pic.twitter.com/GFzLXa3c8y— BJP Karnataka (@BJP4Karnataka) May 21, 2024
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸುದ್ದಿಯನ್ನು ಮುಂದಿಟ್ಟು ಪ್ರತಿಪಕ್ಷ ಬಿಜೆಪಿ ಕೂಡಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಸರ್ಕಾರದಿಂದ ರೋಗಿಗಗಳಿಗೆ ”ಕತ್ತಲೆ ಭಾಗ್ಯ” ಎಂದು ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ ಕಾಂಗ್ರೆಸ್ ಉಡುಗೊರೆ! ಸಿದ್ದರಾಮಯ್ಯ ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ’ ಎಂದು ವ್ಯಂಗ್ಯವಾಡಿದೆ. ‘ಖಜಾನೆ ಖಾಲಿ, ವಿದ್ಯುತ್ ಖಾಲಿ ! ಇದು ಖಚಿತನೇ ಉಚಿತನೇ ನಿಶ್ಚಿತನೇ ಚಿಪ್ಪು ಚೊಂಬು!’ ಎಂದು ಬರೆದುಕೊಂಡಿದೆ.


























































