ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ವಿಧಾನ ಪರಿಷತ್ ಸಮರ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವೆನಿಸಿದೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಮೇಲ್ಮನೆ ಚುನಾವಣೆಯಲ್ಲೂ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
ಈಶಾನ್ಯ, ನೈಋತ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಸಂಬಂಧ ಬಿಜೆಪಿ ಪಕ್ಷವು ಪ್ರಭಾರಿಗಳನ್ನು ನೇಮಕ ಮಾಡಿದೆ.
ಆರು ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ಪಟ್ಟಿ ಹೀಗಿದೆ:
-
ಈಶಾನ್ಯ ಪದವೀಧರ ಕ್ಷೇತ್ರ: ರವಿಕುಮಾರ್
-
ನೈಋತ್ಯ ಪದವೀಧರ, ನೈಋತ್ಯ ಶಿಕ್ಷಕರ ಕ್ಷೇತ್ರ: ವಿ.ಸುನೀಲ್ ಕುಮಾರ್ (ಉಸ್ತುವಾರಿ), ಡಿ.ಎಸ್.ಅರುಣ್ (ಸಹ ಉಸ್ತುವಾರಿ)
-
ಬೆಂಗಳೂರು ಪದವೀಧರ ಕ್ಷೇತ್ರ: ಅಶ್ವತ್ಥ್ ನಾರಾಯಣ
-
ಆಗ್ನೇಯ ಶಿಕ್ಷಕರ ಕ್ಷೇತ್ರ: ಕೆ.ಎಸ್.ನವೀನ್
-
ದಕ್ಷಿಣ ಶಿಕ್ಷಕರ ಕ್ಷೇತ್ರ: ಎಂ.ರಾಜೇಂದ್ರ




















































