ರಾಯಬರೇಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮದುವೆ ಯಾವಾಗ? ಅವರು ಮದುವೆಯಾಗೋದಿಲ್ವಾ? ಯಾಕೆ ಈವರೆಗೂ ಅವರು ಮದುವೆಯಾಗಿಲ್ಲ ಎಂಬ ಪ್ರಶ್ನೆಗಳು ಕೇಳಿಬರುತ್ತಲೇ ಇವೆ. ಇದೀಗ ಲೋಕಸಭಾ ಚುನಾವಣಾ ಅಖಾಡದಲ್ಲಿ ಕೂಡಾ ರಾಹುಲ್ ಗಾಂಧಿಯವರ ವಿವಾಹ ಯಾವಾಗ ಎಂಬ ಪ್ರಶ್ನೆ ಪ್ರತಿಧ್ವನಿಸಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ರಾಯಬರೇಲಿಯಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ರ‍್ಯಾಲಿಯಲ್ಲಿ ಅವರು ಭಾಗವಹಿಸಿದರು. ಪ್ರಚಾರ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ರಾಯಬರೇಲಿಯೊಂದಿಗಿನ ತಮ್ಮ ಕುಟುಂಬದ ಸುದೀರ್ಘಕಾಲದ ಸಂಬಂಧವನ್ನು ಪ್ರಸ್ತಾಪಿಸಿ ಭಾವನಾತ್ಮಕವಾಗಿ ಮಾತನಾಡಿದರು.
ಭಾಷಣ ಮುಗಿಸುವ ಹೊತ್ತಿಗಾಗಲೇ ಸಭೆಯ ಮಧ್ಯೆ ವ್ಯಕ್ತಿಯೊಬ್ಬರು ರಾಹುಲ್ ಅವರನ್ನು ಪ್ರಶ್ನಿಸಿದ ವೈಖರಿ ಎಲ್ಲರ ಗಮನಸೆಳೆಯಿತು. ‘ನಿಮ್ಮ ಮದುವೆ ಯಾವಾಗ’ ಎಂದು ಆ ವ್ಯಕ್ತಿ ಕೇಳಿದರು. ಇದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿದ ರಾಹುಲ್ ಗಾಂಧಿ, ಶೀಘ್ರದಲ್ಲೇ ವೈವಾಹಿಕ ಆಗುತ್ತೇನೆ ಎನ್ನುತ್ತಾ ಜನಸ್ತೋಮದತ್ತ ಕೈ ಬೀಸುತ್ತಾ ನಿರ್ಗಮಿಸಿದ ವೀಡಿಯೋ ವೈರಲ್ ಆಗಿದೆ.
VIDEO | Lok Sabha Elections 2024: Here’s how Congress leader Rahul Gandhi (@RahulGandhi) responded when people asked him about his marriage during a public gathering in UP’s Raebareli.
“Now, I will have to get married soon.”#LSPolls2024WithPTI #LokSabhaElections2024
(Full… pic.twitter.com/eTkGhsW87L
— Press Trust of India (@PTI_News) May 13, 2024
. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಮಾತಿಗೆ ನೆಟ್ಟಿಗರು ಕೂಡಾ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ರಾಹುಲ್ ಅವರ ಕಾಲೆಳೆಯುತ್ತಿರುವ ಕಮೆಂಟ್ಸ್ ಕೂಡಾ ಗಮನಸೆಳೆದಿದೆ.