ನವದೆಹಲಿ: ಲೋಕಸಭಾ ಚುನಾವಣಾ ಅಖಾಡ ರಾಜಕೀಯ ಪಕ್ಷಗಳ ಜಂಘಿಕುಸ್ತಿಗೆ ಸಾಕ್ಷಿಯಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ದೋಸ್ತಿ ಮಾಡಿಕೊಂಡಿದ್ದು, ಈ ಒಕ್ಕೂಟಗಳ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ.
ಈ ನಡುವೆ ಕಾಂಗ್ರೆಸ್ ಪಕ್ಷ ಕುತೂಹಲಕಾರಿ ನಿರ್ಧಾರದಿಂದಾಗಿ ಗಮನಸೆಳೆದಿದೆ. ಸೋನಿಯಾ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಬಹುದೆಂಬ ಮಾತುಗಳು ಕೇಳಿಬಂದಿತ್ತಾದರೂ ಇದೀಗ ಅವರು ಈ ಕ್ಷೇತ್ರವನ್ನು ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದಾರೆ. ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಹೇಳಿಕೆಗಳು ಕೇಳಿಬರುತ್ತಿತ್ತಾದರೂ, ಇದೀಗ ಅವರು ಸ್ಪರ್ಧಿಸಲ್ಲ ಎಂಬ ಸ್ಪಷ್ಟನೆ ಕಾಂಗ್ರೆಸ್ ಪಕ್ಷದಿಂದ ಸಿಕ್ಕಿದೆ. ಇನ್ನೊಂದೆಡೆ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿ ಚುನಾವಣಾ ಎದುರಿಸಿದ್ದಾರೆ. ಜೊತೆಗೆ, ಕಳೆದ ಬಾರಿ ಸೋಲುಂಡಿದ್ದ ಅಮೇಥಿಯಲ್ಲಿ ಈ ಬಾರಿಯೂ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಆದರೆ ಅಲ್ಲಿ ಸ್ಪರ್ಧಿಸುವ ಬದಲು ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರ ಈ ನಿರ್ಧಾರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ. ‘ಕಾಂಗ್ರೆಸ್ಸಿನ ದೊಡ್ಡ ನಾಯಕರು ಲೋಕಸಭೆಯಲ್ಲಿ ಸ್ಪರ್ಧಿಸಲು ಧೈರ್ಯ ಮಾಡುವುದಿಲ್ಲ, ಹೆದರಿ ಓಡಿ ಹೋಗುತ್ತಾರೆ ಎಂದು ಈ ಮೊದಲೇ ಹೇಳಿದ್ದೆ. ಅವರು ಹೆದರಿ ಓಡಿ ಹೋಗಿ ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಿದರು’ ಎಂದು ಮೋದಿ ಬೊಟ್ಟು ಮಾಡಿದರು. ಕಾಂಗ್ರೆಸ್ ಯುವರಾಜ ವಯನಾಡಿನಲ್ಲಿ ಈ ಬಾರಿ ಸೋಲಲಿದ್ದಾರೆ. ಆ ಭಯದಿಂದಲೇ ರಾಯಬರೇಲಿಗೆ ಶಿಫ್ಟ್ ಆಗಿದ್ದಾರೆ. “ಢರೋ ಮತ್” ಹೇಳುತ್ತಿದ್ದವರು ಇಂದು ಭಯಬೀಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ.
ಕಾಂಗ್ರೆಸ್ಸಿನ ದೊಡ್ಡ ನಾಯಕರು ಲೋಕಸಭೆಯಲ್ಲಿ ಸ್ಪರ್ಧಿಸಲು ಧೈರ್ಯ ಮಾಡುವುದಿಲ್ಲ, ಹೆದರಿ ಓಡಿ ಹೋಗುತ್ತಾರೆ ಎಂದು ಈ ಮೊದಲೇ ಹೇಳಿದ್ದೆ. ಅವರು ಹೆದರಿ ಓಡಿ ಹೋಗಿ ರಾಜಸ್ಥಾನದಿಂದ ರಾಜ್ಯಸಭೆ ಪ್ರವೇಶಿಸಿದರು.
ಕಾಂಗ್ರೆಸ್ ಯುವರಾಜ ವಯನಾಡಿನಲ್ಲಿ ಈ ಬಾರಿ ಸೋಲಲಿದ್ದಾರೆ. ಆ ಭಯದಿಂದಲೇ ರಾಯಬರೇಲಿಗೆ ಶಿಫ್ಟ್ ಆಗಿದ್ದಾರೆ. “ಢರೋ ಮತ್”… pic.twitter.com/h3jpSOaJmE
— BJP Karnataka (@BJP4Karnataka) May 3, 2024