ಬೆಂಗಳೂರು: ಲೋಕಸಭಾ ಚುನಾವಣೆ ನಡೆಯುತ್ತಿರುವಾಗಲೇ ಕರ್ನಾಟಕ ವಿಧಾನಪರಿಷತ್ ಸ್ಥಾನಗಳಿಗೂ ಚುನಾವಣೆ ಘೋಷಣೆಯಾಗಿದೆ.
ಸದ್ಯದಲ್ಲೇ ತೆರವಾಗಲಿರುವ ವಿಧಾನ ಪರಿಷತ್ತಿನ 6 ಸ್ಥಾನಗಳ ಆಯ್ಕೆಗಾಗಿ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಅವರ ಅವಧಿ ಇದೇ ವರ್ಷ ಜೂನ್ 21 ರಂದು ಕೊನೆಗೊಳ್ಳಲಿದೆ. ಹಾಗಾಗಿ ಅದಕ್ಕೂ ಮುನ್ನವೇ ಚುನಾವಣೆ ನಡೆಸಲು ಆಯೋಗ ಪ್ರಕ್ರಿಯೆ ಆರಂಭಿಸಿದೆ.
ತೆರವಾಗಲಿರುವ ಸ್ಥಾನಗಳು:
-
ಈಶಾನ್ಯ ಪದವೀಧರರ ಕ್ಷೇತ್ರ (ಡಾ.ಚಂದ್ರಶೇಖರ್ ಬಿ. ಪಾಟೀಲ್)
-
ನೈರುತ್ಯ ಪದವೀಧರರ ಕ್ಷೇತ್ರ (ಆಯನೂರು ಮಂಜುನಾಥ್)
-
ಬೆಂಗಳೂರು ಪದವೀಧರರ ಕ್ಷೇತ್ರ (ಎ.ದೇವೇಗೌಡ),
-
ಆಗ್ನೆಯ ಶಿಕ್ಷಕರ ಕ್ಷೇತ್ರ (ವೈ.ಎ.ನಾರಾಯಣಸ್ವಾಮಿ),
-
ನೈರುತ್ಯ ಶಿಕ್ಷಕರ ಕ್ಷೇತ್ರ (ಎಸ್.ಎಲ್.ಭೋಜೇಗೌಡ),
-
ದಕ್ಷಿಣ ಶಿಕ್ಷಕರ ಕ್ಷೇತ್ರ (ಮರಿತಿಬ್ಬೇಗೌಡ)
ಈ ಮೇಲ್ಮನೆ ಸ್ಥಾನಗಳಿಗೆ ಜೂನ್ 3ರಂದು ನಡೆಯಲಿದ್ದು, ಅಧಿಸೂಚನೆ ಮೇ 09ರಂದು ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದ್ದು, ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 29 ಕೊನೆಯ ದಿನವಾಗಲಿದೆ. ಮತಗಳ ಎಣಿಕೆ ಜೂನ್ 6ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.


























































