ಭಾಗಲ್ಪುರ: ಭೋಜ್‌ಪುರಿ ನಟಿ ಅಮೃತಾ ಪಾಂಡೆ ಸಾವಿಗೆ ಶರಣಾಗಿರುವ ಸುದ್ದಿ ಸಿನಿಮಾ ರಂಗದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ಬಿಹಾರದ ಭಾಗಲ್ಪುರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ 27 ವರ್ಷ ಹರೆಯದ ನಟಿ ಅಮೃತಾ ಪಾಂಡೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕೆಲವು ಗಂಟೆ ಮುನ್ನ ನಟಿ ಅಮೃತಾ ಪಾಂಡೆ, ಜೀವನವು ಎರಡು ದೋಣಿಗಳ ಮೇಲೆ ಸವಾರಿ ಮಾಡುತ್ತಿದೆ, ನಾನು ನಮ್ಮ ದೋಣಿಯನ್ನು ಮುಳುಗಿಸಿ ಅವನ ಹಾದಿಯನ್ನು ಸುಲಭಗೊಳಿಸಿದ್ದೇನೆ’ ಎಂದು ತಮ್ಮ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ರಹಸ್ಯವಾದ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಜೋಗಸರ ಠಾಣೆ ಪೊಲೀಸರು ಪರಿಶೀಲನೆ ನಡರಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.





















































