ಬೆಂಗಳೂರು: ಲೋಕಸಭಾ ಚುನಾವಣೆ ಪೈಕಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದ್ದು ಹಳೆ ಮೈಸೂರು ಭಾಗ ಸೇರಿದಂತೆ 14 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನವಾಗಿದೆ. ದೇಶದಲ್ಲಿ ಎರಡನೇ ಹಂತವಾಗಿದ್ದರೂ ಕರ್ನಾಟಕದಲ್ಲಿ ಇದು ಆರಂಭದ ಹಂತದ ಮತದಾನ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.65ರಷ್ಟು ಮತದಾನವಾಗಿದ್ದು, ಈ ಮತದಾನ ಪ್ರಮಾಣವನ್ನು ಆಧರಿಸಿ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಶುಕ್ರವಾರ ಬೆಳಗ್ಗೆ ಏಳು ಗಂಟೆಯಿಂದ ಸಂಜೆವರೆಗೂ ಮತದಾನ ನಡೆದಿದ್ದು ಒಟ್ಟಾರೆಯಾಗಿ ರಾಜ್ಯದ 14 ಕ್ಷೇತ್ರಗಳಲ್ಲಿ ಶೇಕಡಾ 69.23ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಅತೀ ಹೆಚ್ಚು ಅಂದರೆ ಶೇಕಡಾ 81.48ರಷ್ಟುಮತದಾನವಾಗಿದೆ.
ಮತದಾನ ಪ್ರಮಾಣ ಹೀಗಿದೆ:
- ಮಂಡ್ಯ: 8148%
- ಕೋಲಾರ: 78.07%,
- ತುಮಕೂರು : 77.70
- ಹಾಸನ: 77.51%,
- ದಕ್ಷಿಣ ಕನ್ನಡ: 77.43%,
- ಚಿಕ್ಕಬಳ್ಳಾಪುರ: 76.82%,
- ಚಾಮರಾಜನಗರ: 76.59%,
- ಉಡುಪಿ-ಚಿಕ್ಕಮಗಳೂರು: 76.06%
- ಚಿತ್ರದುರ್ಗ: 73.11%,
- ಮೈಸೂರು: 70.45%
- ಬೆಂಗಳೂರು ಗ್ರಾಮಾಂತರ: 67.29%
- ಬೆಂಗಳೂರು ಉತ್ತರ: 54.42 %
- ಬೆಂಗಳೂರು ದಕ್ಷಿಣ: 53.15%
- ಬೆಂಗಳೂರು ಕೇಂದ್ರ : 52.81%
ದಿನಾಂಕ 26-04-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter pic.twitter.com/dtGqEhVPKx
— Chief Electoral Officer, Karnataka (@ceo_karnataka) April 26, 2024