ವಿಶ್ವಸಂಸ್ಥೆ: ಸಮರಪೀಡಿತ ಗಾಜಾಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಪ್ರತಿಪಾದಿಸಿದೆ. ಸಂಘರ್ಷ ಆರಂಭವಾಗಿ 5 ತಿಂಗಳು ಕಳೆದ ನಂತರ ವಿಶ್ವಸಂಸ್ಥೆ ಈ ರೀತಿಯ ಪ್ರಸ್ತಾಪವನ್ನು ಮುಂದಿಟ್ಟಿದೆ.
ವಿಶ್ವಸಂಸ್ಥೆಯಲ್ಲಿ ಈ ಹಿಂದೆ ಮಂಡಿಸಲಾಗಿದ್ದ ಕದನ ವಿರಾಮ ನಿರ್ಣಯಗಳನ್ನು ಅಮೇರಿಕಾ ತಡೆಹಿಡಿದಿತ್ತು. ಈ ಬಾರಿ ಮಂಡನೆಯಾದ ನಿರ್ಣಯದ ವೇಳೆ ರಂಜಾನ್ ಮಾಸಾಚರಣೆಯ ಪರಿಸ್ಥಿತಿ ಸಕಾಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸುಮಾರು 14 ಸದಸ್ಯ ರಾಷ್ಟ್ರಗಳು, ಈಗ ರಂಜಾನ್ ಪವಿತ್ರ ಮಾಸಾಚರಣೆ ನಡೆಯುತ್ತಿರುವುದರ ದೃಷ್ಟಿಯಿಂದ ತಕ್ಷಣಕ್ಕೆ ಕದನ ವಿರಾಮ ಘೋಷಣೆಯಾಗಬೇಕೆಂಬ ಬಗ್ಗೆ ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿವೆ.
ಈ ಕದನ ವಿರಾಮ “ಶಾಶ್ವತ, ಸುಸ್ಥಿರ ಕದನ ವಿರಾಮ”ಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.