ದೊಡ್ಡಬಳ್ಳಾಪುರ: ಚಿರತೆ ದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ತಾಲೂಕಿನ ಮೆಳೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ತಡರಾತ್ರಿ ಸುಮಾರು 2ಗಂಟೆಯಲ್ಲಿ ನಡೆದಿದೆ.
ಮುನಿಕೃಷ್ಣ ಎಂಬುವರಿಗೆ ಸೇರಿದ ಎರಡು ಹಸುಗಳು ಚಿರತೆ ದಾಳಿಗೆ ಬಲಿಯಾಗಿವೆ. ಎಂದಿನಂತೆ ಹಸುಗಳ ಶೆಡ್ ನಲ್ಲಿ ಇರಿಸಲಾಗಿದ್ದ ಹಸುಗಳ ಮೇಲೆ ಚಿರತೆ ಎರಗಿ ಬಲಿ ಪಡೆದಿದೆ.
ಬೆಲೆ ಬಾಳುವ ಹಸುಗಳನ್ನ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಕೂಡಲೇ ಚಿರತೆಯನ್ನ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.