ದೊಡ್ಡಬಳ್ಳಾಪುರ: ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 5484 ಲೀಟರ್ (24 ಬಾಕ್ಸ್ ) ಬಿಯರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇವನಹಳ್ಳಿಯ ಕೆಎಸ್‌ಬಿಸಿಎಲ್ ಘಟಕಕ್ಕೆ ಭೇಟಿ ನೀಡಿ ವುಡ್ ಪೆಕರ್ ಡಿಸ್ಟಿಲರೀಸ್ ಅಂಡ್ ಬ್ರಿವರೀಸ್ ಪ್ರೈ.ಲಿ (0213)ರ ರಹದಾರಿ ಪತ್ರ ಪರಿಶೀಲಿಸಿದಾಗ 700 ಬಾಕ್ಸ್ ಬಿಯರ್ ಪೈಕಿ 24 ಬಾಕ್ಸ್ ಗಳ ಅಬಕಾರಿ ಭದ್ರತಾ ಚೀಟಿ ಇರದ ಕಾರಣ ಅಕ್ರಮ ದಾಸ್ತಾನು ಜಪ್ತಿ ಮಾಡಲಾಗಿದೆ.
ಸೋಮವಾರ ಸಂಜೆ 4.10 ರ ಸುಮಾರಿಗೆ ಅಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ), ಬೆಂಗಳೂರು ಗ್ರಾಮಾಂತರ ಮತ್ತು ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಹೊಸಕೋಟೆ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರು ಭೇಟಿ ನೀಡಿದಾಗ ಅಕ್ರಮ ದಾಸ್ತಾನು ಕಂಡು ಬಂದಿದ್ದು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 12 ಹಾಗೂ ಕರ್ನಾಟಕ ಅಬಕಾರಿ (Possession, Transport, Import and Export of Intoxicantso Rules 1967 2-30 Karnataka Excise Distillery License Conditions 1 0 ಉಲ್ಲಂಘನೆಯಾಗಿದ್ದು, ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಯರ್ ಅಕ್ರಮ ದಾಸ್ತಾನಿನ ಮೌಲ್ಯ 9,04,404 ರೂಗಳಾಗಿದೆ ಎಂದು ಅಂದಾಜಿಸಲಾಗಿದೆ.