ಬೆಂಗಳೂರು: ಲೋಕಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿರುವ ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಪಡಿಸಿದೆ.
ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ತಲಾ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಏಪ್ರಿಲ್ 26 ಮತದಾನ ನಡೆಯುವ ಕ್ಷೇತ್ರಗಳು:
ಬೆಂಗಳೂರು ಕೇಂದ್ರ,
ಬೆಂಗಳೂರು ಉತ್ತರ,
ಬೆಂಗಳೂರು ದಕ್ಷಿಣ,
ಬೆಂಗಳೂರು ಗ್ರಾಮಾಂತರ,
ಮಂಡ್ಯ,
ದಕ್ಷಿಣ ಕನ್ನಡ,
ಉಡುಪಿ-ಚಿಕ್ಕಮಗಳೂರು,
ಮೈಸೂರು-ಕೊಡಗು,
ಚಾಮರಾಜ ನಗರ,
ಹಾಸನ,
ತುಮಕೂರು,
ಚಿಕ್ಕಬಳ್ಳಾಪುರ,
ಚಿತ್ರದುರ್ಗ,
ಕೋಲಾರ
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4,
- ನಾಮಪತ್ರಗಳ ಪರಿಶೀಲನೆ ದಿನಾಂಕ ಏಪ್ರಿಲ್ 5
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 8
ಮೇ 7ರಂದು ಮತದಾನ ನಡೆಯುವ ಕ್ಷೇತ್ರಗಳು:
ಶಿವಮೊಗ್ಗ,
ದಾವಣಗೆರೆ,
ಉತ್ತರಕನ್ನಡ,
ಧಾರವಾಡ,
ಹಾವೇರಿ,
ಬೆಳಗಾವಿ,
ಬೀದರ್,
ಕಲಬುರಗಿ,
ಚಿಕ್ಕೋಡಿ,
ವಿಜಯಪುರ,
ಬಾಗಲಕೋಟೆ,
ಕೊಪ್ಪಳ,
ರಾಯಚೂರು,
ಬಳ್ಳಾರಿ,
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 19
- ನಾಮಪತ್ರಗಳ ಪರಿಶೀಲನೆ ದಿನಾಂಕ ಏಪ್ರಿಲ್ 20
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 22






















































