ಲಖನೌ: ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆ ವಾರಾಂತ್ಯದ ದಿನವಾದ ಶನಿವಾರ ಭೀಕರ ದುರಂತಕ್ಕೆ ಸಾಕ್ಷಿಯಾಯಿತು. ನಾಲೆಗೆ ಟ್ರಾಕ್ಟರ್ ಟ್ರಾಲಿ ಅಪಘಾತದಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ.
ಮಾಘ ಪೂರ್ಣಿಮೆ ಅಂಗವಾಗಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನಕ್ಕಾಗಿ ಜೈಥಾರಾ ಸುತ್ತಮುತ್ತಲ ಗ್ರಾಮದವರು ಟ್ರಾಕ್ಟರ್’ನಲ್ಲಿ ತೆರಳುತ್ತಿದ್ದರು. 50 ಕ್ಕೂ ಹೆಚ್ಚು ಜನರಿದ್ದ ಟ್ರಾಕ್ಟರ್ ಟ್ರಾಲಿ ಮಾರ್ಗ ಮಧ್ಯೆ ನಾಲೆಗೆ ಉರುಳಿಬಿದ್ದಿದೆ ಎನ್ನಲಾಗಿದೆ. ಕಾಸ್ಗಂಜ್ ಜಿಲ್ಲೆಯ ಗಾದಾಯಿ ಬಳಿಯ ರಿಯಾಜ್ ಗಂಜ್-ಪಾಟಿಯಾಲಿ ಲಿಂಕ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 24 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.