ಟೋಕಿಯೋ: ಜಪಾನ್‌ನ ಇಶಿಕಾವಾ ಪ್ರಾಂತ್ಯದಲ್ಲಿ ವರ್ಷಾರಂಭದಲ್ಲಿ ಸಂಭವಿಸಿದ 7.6 ತೀವ್ರತೆಯ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 220ಕ್ಕೆ ಏರಿದೆ. 20 ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭೂಕಂಪದಿಂದ ನಲುಗಿರುವ ಜಪಾನಿನಲ್ಲಿ ಇದೀಗ ಭೀಕರ ಛಳಿಯ ಪರಿಸ್ಥಿತಿ ಜನರನ್ನು ಕಂಗಾಲಾಗಿಸಿದೆ. ಜಪಾನಿನ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಸಂಜೆಯಿಂದ ಮಂಗಳವಾರದವರೆಗೆ ಬಲವಾದ ಗಾಳಿ, ಹಿಮ ಪ್ರಮಾಣ ಹೆಚ್ಚಾಗಲಿದೆ. ಜೊತೆಗೆ ಸಮುದ್ರದಲ್ಲಿ ಎತ್ತರದ ಅಲೆಗಳು ಕಿನಾರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಜಪಾನ್ ಹವಾಮಾನ ಸಂಸ್ಥೆ (JMA) ತಿಳಿಸಿದೆ.




























































