ನವದೆಹಲಿ: ಸಂಸತ್ತಿನ ಒಳಗೆ ಹೊಗೆ ಬಾಂಬ್ ಸಿಡಿಸಿ ದಾಳಿ ಪ್ರಕರಣದ ಆರೋಪಿಗಳನ್ನು ಸುಳ್ಳುಪತ್ತೆ ಪರೀಕ್ಷೆಗೆ ಗುರಿಪಡಿಸಲಾಗಿದೆ.
ಡಿ.13 ರಂದು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬವರು ಲೋಕಸಭಾ ಕಲಾಪ ನಡೆಯುತ್ತಿರುವಾಗಲೇ ಸಂಸತ್‌ನ ಒಳಗೆ ಹೋಗೆ ಬಾಂಬ್ ಸಿಡಿಸಿ ಕೃತ್ಯ ನಡೆಸಿದ್ದರು. ಕೂಡಲೇ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನೀಲಂ, ಅಮೋಲ್ ಶಿಂಧೆ, ವಿಶಾಲ್ ಮತ್ತು ಲಲಿತ್ ಝಾ ಗುರ್ಗಾಂವ್ ಎಂಬವರನ್ನೂ ತನಿಖಾ ತಂಡ ಬಂಧಿಸಿತ್ತು.
ಈ ಪ್ರಕರಣದ ತನಿಖೆಯನ್ನು ಬಿರುಸುಗೊಳಿಸಿರುವ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ಸುಳ್ಳುಪತ್ತೆ ಪರೀಕ್ಷೆಗೆ ಗುರಿಪಡಿಸಿದ್ದಾರೆ. 6 ಆರೋಪಿಗಳ ಪೈಕಿ ಮಹಿಳಾ ಆರೋಪಿ ನೀಲಂ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡದ್ದರಿಂದ ಐವರಿಗೆ ಶುಕ್ರವಾರ ಸುಳ್ಳುಪತ್ತೆ ಪರೀಕ್ಷೆ ಮತ್ತು ಮಂಪರು ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.






















































