ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿರುದ್ಯೋಗ ಸಮಸ್ಯೆಯ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 15-29 ವರ್ಷ ವಯಸ್ಸಿನ ವ್ಯಕ್ತಿಗಳಿಗೆ 10% ನಿರುದ್ಯೋಗ ದರವನ್ನು ಉಲ್ಲೇಖಿಸಿ (PLFS: ಜುಲೈ 2022-ಜೂನ್ 2023) ಸಾಮಾಜಿಕ ಜಾಲತಾಣ ‘X’ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಖರ್ಗೆ, ಸಮಸ್ಯೆಯ ತೀವ್ರತೆಯನ್ನು ಒತ್ತಿ ಹೇಳಿದ್ದಾರೆ.
ಗ್ರಾಮೀಣ ಭಾರತದಲ್ಲಿ ನಿರುದ್ಯೋಗ ದರವು 8.3% ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಇದು 13.8% ಕ್ಕೆ ಏರುತ್ತದೆ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯುವಕರ ಕಳವಳ ಬಗ್ಗೆ ಗಮನಸೆಳೆದಿರುವ ಅವರು, ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗಗಳು ಕಣ್ಮರೆಯಾಗುತ್ತಿವೆ, ನೇಮಕಾತಿ ಪರೀಕ್ಷೆಗಳಿಂದ ಉದ್ಯೋಗವನ್ನು ಖಾತ್ರಿಪಡಿಸುವವರೆಗಿನ ಪ್ರಯಾಣದಲ್ಲಿನ ಸಂಕೀರ್ಣತೆ ಮತ್ತು ಎಂಎಸ್‌ಎಂಇ ವಲಯದ ಮೇಲೆ ಆಗಬಹುದಾದ ದುಷ್ಪರಿಣಾಮ ಬಗ್ಗೆ ಉಲ್ಲೇಖಿಸಿದ್ದಾರೆ.
ಲಕ್ಷಾಂತರ ಯುವಕರ ಉದ್ಯೋಗಗಳನ್ನು ಏಕೆ ಕಸಿದುಕೊಳ್ಳಲಾಯಿತು ಮತ್ತು ಅವರ ಭವಿಷ್ಯವನ್ನು ಏಕೆ ಅಪಾಯಕ್ಕೆ ತಳ್ಳಲಾಯಿತು?’ ಎಂದು ಅವರು ಪ್ರಶ್ನಿಸಿದ್ದಾರೆ.