ಬೆಂಗಳೂರು: ದೆಹಲಿಯಲ್ಲಿ ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರಿಗೆ 2021ರ ಡಿಸೆಂಬರ್ 21ರಂದು ಪ್ರಧಾನಮಂತ್ರಿಗಳು ನೀಡಿರುವ ಭರವಸೆಯನ್ನು ಈತನಕ ಈಡೇರಿಸಿಲ್ಲ. ಹಾಗಾಗಿ ಮುಂದಿನ ಫೆಬ್ರವರಿ 26 ರೈತರ ದೆಹಲಿ ಚಲೋ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ ಪ್ರಮುಖರು ಈ ಹೋರಾಟ ಕುರಿತಂತೆ ಮಾಹಿತಿ ಹಂಚಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಕುರುಬೂರ್ ಶಾಂತಕುಮಾರ್ (ಕರ್ನಾಟಕ), ಜಗಜೀತ್ ಸಿಂಗ್ ದಲ್ಲೆವಾಲ್ (ಪಂಜಾಬ್), ಕೆ.ವಿ.ಬಿಜು (ಕೇರಳ), ಅಭಿಮನ್ಯು ಕೋಹರ್ ಮತ್ತು ಲಖ್ವಿಂದರ್ ಸಿಂಗ್ ಔಲಾಖ್ (ಹರಿಯಾಣ), ಸಚಿನ್ ಮೊಹಾಪಾತ್ರ (ಒರಿಸ್ಸಾ), ಅರುಣ್ ಸಿನ್ಹಾ (ಬಿಹಾರ), ರವಿದತ್ ಸಿಂಗ್ ( ಮಧ್ಯಪ್ರದೇಶ), ಶಂಕರ್ ದಾರೆಕರ್ (ಮಹಾರಾಷ್ಟ್ರ), ರಾಜ್ಯ ರೈತ ಸಂಘದ ವಿ ಆರ್ ನಾರಾಯಣ ರೆಡ್ಡಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಬಸವರಾಜ್ ಪಾಟೀಲ್, ಎನ್ ಹೆಚ್ ದೇವಕುಮಾರ್, ಹತ್ತಳ್ಳಿ ದೇವರಾಜ್ ಬರಡನ್ಪುರ ನಾಗರಾಜ್, ಪರಶುರಾಮ್, ರಾಜೇಶ್ , ಧರ್ಮರಾಜ್ ಸಾವು ಸಹಿತ ರೈತ ಮುಖಂಡರನೇಕರು ಉಪಸ್ಥಿತರಿದ್ದರು.
ದೇಶದ ರೈತರ ಪ್ರಮುಖ 7 ಒತ್ತಾಯಗಳ ಬಗ್ಗೆ “ದೆಹಲಿ ಚಲೋ” ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಕೀಯತರವಾಗಿ ರೈತರನ್ನ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ ಈಗಾಗಲೇ ವಿವಿಧ ರಾಜ್ಯಗಳಲ್ಲಿ 6 ಕಿಸಾನ್ ಮಹಾಪಂಚಾಯತ್‌ಗಳನ್ನು ಒಡಿಸ್ಸಾದ ಭುವನೇಶ್ವರ, ಪಂಜಾಬಿನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರು) ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ. ಮುಂಬರುವ ಒಂದೂವರೆ ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇನ್ನು 14 ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಂಡಿದ್ದೇವೆ ಎಂದವರು ತಿಳಿಸಿದರು.
‘ದೆಹಲಿ ಚಲೋ’ ಕಾರ್ಯಕ್ರಮದ ಪ್ರಮುಖ ಒತ್ತಾಯಗಳು:
-
ಡಾ. ಸ್ವಾಮಿನಾಥನ್ ವರದಿಯಂತೆ C2+50% ಸೂತ್ರದ ಪ್ರಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು MSP ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು.
-
ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು.
-
ಭೂಸ್ವಾಧೀನ ಕಾನೂನು 2013 ರಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು 70% ರೈತರ ಲಿಖಿತ ಅನುಮತಿ ಮತ್ತು ಯಾವುದೇ ಭೂಸ್ವಾಧೀನಕ್ಕೆ ಮೊದಲು ಬಡ್ಡಿದರ ಜೊತೆಗೆ 4 ಪಟ್ಟು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಭೂ ಸ್ವಾಧೀನ ಕಾನೂನು 2013 ಅನ್ನು ಜಾರಿಗೊಳಿಸಬೇಕು.
-
ಎಲ್ಲಾ ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ. ಕೃಷಿ ಉತ್ಪನ್ನಗಳ ಬೆಲೆ ಕುಷಿಯದಂತೆ ರಕ್ಷಿಸಬೇಕು ಭಾರತ ಸರ್ಕಾರ ಡಬ್ಲ್ಯುಟಿಒದಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು, ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯನ್ನು ನಿಲ್ಲಿಸಬೇಕು.
-
ವಿದ್ಯುತ್ ಮಂಡಳಿಗಳ ಖಾಸಗೀಕರಣ ಬೇಡ. ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಉನ್ನಾರ ನಿಲ್ಲಬೇಕು.
-
ಕೃಷಿ ಮತ್ತು ಚಿಲ್ಲರೆ ಸಣ್ಣ ಉದ್ಯಮಗಳಿಗೆ ಮಾತ್ರ ಮೀಸಲಿಡಬೇಕು. ಕೃಷಿಯಲ್ಲಿ ಎಫ್‌ಡಿಐ ಮತ್ತು ಇ-ಕಾಮರ್ಸ್ ಸೇರಿದಂತೆ ಚಿಲ್ಲರೆ ವ್ಯಾಪಾರದ ಎಲ್ಲಾ ಸ್ವರೂಪಗಳನ್ನು ನಿಷೇಧಿಸಲಾಗುವುದು. ಕೃಷಿ ಮತ್ತು ಚಿಲ್ಲರೆ ವ್ಯಾಪಾರದ ಕಾರ್ಪೊರೇಟೀಕರಣವನ್ನು ತಡೆಗಟ್ಟಲು ನೀತಿ ಮತ್ತು ಕಾನೂನು ಜಾರಿ ಮಾಡಬೇಕು.
-
60 ವರ್ಷ ತುಂಬಿದ ರೈತರಿಗೆ ಪಿಂಚಣಿಯನ್ನು ಮಾಸಿಕ ಐದು ಸಾವಿರ ನಿಗದಿಪಡಿಸಬೇಕು.
-
ಫಸಲ್ ಭೀಮಾ ಬೆಳವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು.
-
ಕರ್ನಾಟಕ ರಾಜ್ಯದಲ್ಲಿ ಬಗರುಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ಕೂಡಲೇ ವಿತರಿಸಬೇಕು.
-
ದೇಶದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಬೇಕು.