ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಅನಿಲ್ ಕುಮಾರ ಅವರಿಗೆ ಪಿಎಚ್‌ಡಿ ಪದವಿ ನೀಡಲಾಗಿದೆ.
ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಮತ್ತು ಸಹಪ್ರಾಧ್ಯಾಪಕ ಡಾ. ಎಂ. ಸಿದ್ದಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕನ್ನಡ ರಂಗಭೂಮಿ ಮಹಿಳಾ ಕಲಾವಿದರು: ಒಂದು ಸ್ತ್ರೀವಾದಿ ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ತಿಳಿಸಿದೆ.


















































