ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಕೇವಲ ಜೊಳ್ಳಿನಿಂದ ಕೂಡಿದೆ ಎಂದುಮಾಜಿ ಸಚಿವ ಅರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಎಂಟು ತಿಂಗಳ ಅವಧಿಗೆ, ಮುಖ್ಯಮಂತ್ರಿ ಶ್ರಿ ಸಿದ್ದರಾಮಯ್ಯ ನವರ, ಇಂದು ಸದನದಲ್ಲಿ ಮಂಡಿಸಿದ ರಾಜ್ಯ ಆಯವ್ಯಯ ನಿರಾಶಾದಾಯಕವಾಗಿದ್ದು, ಕೇವಲ ಜೊಳ್ಳಿನಿಂದ ಕೂಡಿದೆ ಎಂದಿದ್ದಾರೆ.
ಬಜೆಟ್ ಮಂಡಿಸುವ ಅವಕಾಶವನ್ನು ಮುಖ್ಯಮಂತ್ರಿಗಳು, ಹಿಂದಿನ ಬಿಜೆಪಿ ಸರಕಾರ, ಬಿಜೆಪಿ ಪಕ್ಷ ಮತ್ತು ಕೇಂದ್ರ ಸರಕಾರವನ್ನು ದೂಷಣೆ ಮತ್ತು ಟೀಕೆ ಮಾಡುವ ವೇದಿಕೆಯನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿರುವ ಅರಗ ಜ್ಞಾನೇಂದ್ರ, ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿ, ಕೇವಲ ನಾಮಕಾವಸ್ಥೆ ಅನುದಾನ ನೀಡಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಲ್ಲದ, ಈ ಬಜೆಟ್, ರಾಜ್ಯದ ಜನತೆಗೆ ನಿರಾಶೆ ಮೂಡಿಸಿದೆ ಎಂದು ವಿಶ್ಲೇಷಿಸಿದ್ದಾರೆ.