ಬೆಂಗಳೂರು: ರೈತರ ಕೃಷಿ ಸಾಲ ನೀತಿ ಬಗ್ಗೆ ಕೃಷಿ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್‌ಟಿ ರದ್ದು ಮಾಡುವ ಬಗ್ಗೆ ಹಾಗೂ ಮೇಕೆದಾಟು ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಪಟ್‌ನಲ್ಲಿ ರೈತರ ಕೋರಿಕೆಯನ್ನು ಪರಿಗಣಿಸಿಲ್ಲ ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಕುರುಬೂರು ಶಾಂತಕುಮಾರ್, ಎಪಿಎಂಸಿ ತಿದ್ದುಪಡಿ ಕಾನೂನು ರದ್ದು ತಿದ್ದುಪಡಿ ಭರವಸೆ, ತರಕಾರಿ ಮಾರುಕಟ್ಟೆಗಳಲ್ಲಿ 50 ಸಿತಲಿಕರಣ ಘಟಕ ಆರಂಭದ ಒತ್ತಾಯ, ಮಂಡ್ಯ ಮೈಶುಗರ್ ಕಾರ್ಖಾನೆ ಉನ್ನತಿಕರಣದ ಆಗ್ರಹ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದಾಗಬೇಕೆಂಬ ಮನವಿ, ರಾಜ್ಯದ ಕಬ್ಬು ಬೆಳೆಗಾರರಿಗೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರುವುಗೊಳಿಸಿ ರೈತರಿಗೆ ಹಣ ಕೊಡಿಸಬೇಕು ಎಂಬ ಒತ್ತಾಯಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಂಧಿಸಿಲ್ಲ ಎಂದು ಹೇಳಿದ್ದಾರೆ.
ಅನ್ನ ಭಾಗ್ಯ ಯೋಜನೆಗೆ10,000 ಕೋಟಿ ಮೀಸಲಿಟ್ಟ ಹಣದಿಂದ ರಾಜ್ಯದ ರೈತರಿಂದಲೇ ಆಕ್ಕಿ ರಾಗಿ ಜೋಳ ಖರೀದಿ ಮಾಡಬೇಕು ಎಂದಿರುವ ಅವರು, ಮೇಕೆದಾಟು ಯೋಜನೆ ಕಳಸ ಬಂಡೂರಿ ಯೋಜನೆ ಕೇವಲ ಘೋಷಣೆ ಬದಲಾಗಿ ಕಾಮಗಾರಿ ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯ ಈ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟ ಪ್ರತಿಕ್ರಿಯೆ ಇಲ್ಲ ಎಂಬುದು ಬೇಸರದ ಸಂಗತಿ ಎಂದ ಅವರು, ರೈತರ ಕೃಷಿ ಸಾಲ ನೀತಿ ಬಗ್ಗೆ ಕೃಷಿ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್‌ಟಿ ರದ್ದು ಮಾಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಕುರುಬುರ್ ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.