ದೊಡ್ಡಬಳ್ಳಾಪುರ: ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡರ ಪರ ಇಂದು ಡಿ ಬಾಸ್ ದರ್ಶನ್ ದೊಡ್ಡಬಳ್ಳಾಪುರ ದಲ್ಲಿ ರೋಡ್ ಷೋ ನಡೆಸುವ ಮೂಲಕ ಮತಬೇಟೆಗೆ ಇಳಿದಿದ್ದರು. ಬಾಶೆಟ್ಟಿಹಳ್ಳಿಯಿಂದ ಆರಂಭವಾದ ರೋಡ್ ಶೋಗೆ ದರ್ಶನ್ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ರೈಲ್ವೇ ಸ್ಟೇಷನ್ ಬಳಿ ಮಾತನಾಡಿದ ನಟ ದರ್ಶನ್, ಮೂರು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು ಬಿ.ಮುನೇಗೌಡ ಅವರು ದೊಡ್ಡಬಳ್ಳಾಪುರ ತಾಲೂಕಿನ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದು, ಈ ಚುನಾವಣೆಯಲ್ಲಿ ಮುನೇಗೌಡರಿಗೆ ಮತ ನೀಡುವಂತೆ ಮನವಿ ಮಾಡಿದರು.
Exclusive video #DBoss #Kranti #BossOfSandalwood @dasadarshan pic.twitter.com/SdfIYDLoW9
— Suprith Darshan (@DarshanSuprith) May 8, 2023
ದರ್ಶನ್ ರೋಡ್ ಶೋ ಹಿನ್ನೆಲೆ, ರಸ್ತೆಯ ಉದ್ದಕ್ಕೂ ಕಿಕ್ಕಿರಿದು ಜನ ಸೇರಿದ್ದರು, ಜನರತ್ತ ಕೈ ಬೀಸಿ ದರ್ಶನ್ ರೋಡ್ ಶೋ ನಡೆಸಿದರು. ರೋಡ್ ಶೋದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ, ಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



















































