ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸುಗೊಂಡಿದ್ದು ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಮತದಾರರ ಮನಗೆಲ್ಲಲು ರಾಜಕೀಯ ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿವೆ.
ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಶತ ಪ್ರಯತ್ನದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ನೆರೆ ರಾಜ್ಯಗಳ ನಾಯಕರು ಸಾಥ್ ನೀಡಿದ್ದಾರೆ. ಮತ್ತೊಂದೆಡೆ ಅಲ್ಪ ಸಂಖ್ಯಾತರೇ ಹೆಚ್ಚಿರುವ ಪ್ರದೇಶಗಳಿಗೆ ಹಾಗೂ ತಮಿಳು ಭಾಷಿಗರ ಪ್ರಾಬಲ್ಯದ ಪ್ರದೇಶಗಳಲ್ಲಿ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಸಾಹಸವೂ ಕಾಂಗ್ರೆಸ್‌ನಿಂದ ಸಾಗಿದೆ. ಈನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ ಅವರು ನಿರಂತರ ರಣತಂತ್ರದಲ್ಲಿ ತೊಡಗಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೂ ಆದ ಜಿ.ಎ.ಬಾವಾ ಅವರು ಬುಧವಾರದ ಅವರ ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡರು.
ಶಾಂತಿನಗರ, ಬಿಟಿಎಂ ಲೇಔಟ್, ಚಾಮರಾಜಪೇಟೆ, ಸಿ.ವಿ.ರಾಮನ್‌ನಗರ, ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ತಮಿಳುನಾಡಿನ ಸಂಸದ ತಿರುಮವಳವನ್ ಜೊತೆ ಜಿ.ಎ.ಬಾವಾ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಮತ ಶಿಕಾರಿ ನಡೆಸಿದರು.
ಶಾಂತಿನಗರದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆ ನಡೆಸಿ ಶಾಸಕ ಹ್ಯಾರಿಸ್ ಗೆಲುವಿಗೆ ಶ್ರಮಿಸುವಂತೆ ಕಾರಗಯಕರ್ತರನ್ನು ಹುರಿದುಂಬಿಸಿದ ಈ ನಾಯಕರು, ಚಾಮರಾಜಪೇಟೆ ಕ್ಷೇತ್ರದ ವಿವಿಧೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಚಾಮರಾಜಪೇಟೆ ಕ್ಷೇತ್ರದಲ್ಲಿ ಹಿಂದೆ ಜಿ.ಎ.ಬಾವಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ನೀಡಿದ ಬೆಂಬಲವನ್ನು ಈ ಬಾರಿ ಜಮೀರ್ ಅಹ್ಮದ್ ಅವರಿಗೂ ನೀಡಿ ಪುನರಾಯ್ಕೆ ಮಾಡಬೇಕೆಂದು ತಿರುಮವಲವನ್ ಅವರು ಚಾಮರಾಜಪೇಟೆಯ ಮತದಾರರಿಗೆ ಮನವಿ ಮಾಡಿದರು.
ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜಿ.ಎ.ಬಾವಾ ಈಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಜನರಿಗೆ ನೀಡಿರುವ ‘ಗ್ಯಾರಂಟಿ’ ಭರವಸೆಗಳು ಜಾರಿಗೆ ಬರುವುದೂ ನಿಶ್ಚಿತ ಎಂದರು.
ಇದೇ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎ.ಬಾವಾ, ಈ ಬಾರಿ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ದಿಗ್ವಿಜಯ ಸಾಧಿಸಲಿದೆ ಎಂದರು. ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಶಾಸಕರಾಗಿ ಜಮೀರ್ ಅಹ್ಮದ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರು ಈ ಚುನಾವಣೆಯಲ್ಲೂ ಪುನರಾಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಟರಾಯನಪುರದಲ್ಲೂ ಜಿ.ಎ.ಬಾವಾ ಅವರು ತಮಿಳುನಾಡು ಸಂಸದ ತಿರುಮವಳವನ್ ಜೊತೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡರ ಪರವಾಗಿ ಪ್ರಚಾರ ಕೈಗೊಂಡರು. ಶಾಸಕ ಕೃಷ್ಣ ಬೈರೇಗೌಡರು ಕಳಂಕರಹಿತ ರಾಜಕಾರಣಿಯಾಗಿದ್ದು ಜನಹಿತಕ್ಕಾಗಿ ಕೆಲಸ ಮಾಡಿದ್ದಾರೆ. ಈ ಕಾರ್ಯಗಳು ಅವರ ಗೆಲುವಿನಲ್ಲಿ ಪ್ರತಿಬಿಂಭಿಸಲಿದೆ ಎಂದು ಜಿ.ಎ.ಬಾವಾ ನುಡಿದರು.