ಬೆಂಗಳೂರು: ಈ ಬಾರಿ ಚುನಾವಣಾ ಫಲಿತಾಂಶ ಅತಂತ್ರವಾದರೆ ಬಿಜೆಪಿ-ಜೆಡಿಎಸ್ ಸರ್ಕಾರ ರಚಿಸಲು ಕಸರತ್ತು ನಡೆಸುವ ಸಾಧ್ಯತೆಗಳೇ ಹೆಚ್ಚು. ಈ ಬಗ್ಗೆ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದು ಇದೀಗ ಆ ರೀತಿಯ ಅಂತೆ-ಕಂತೆಗಳಿಗೆ ಪ್ರೀತಂ ಗೌಡರ ಮಾತುಗಳು ಪುಷ್ಟಿ ನೀಡಿವೆ.
ಚುನಾವಣೋತ್ತರದಲ್ಲಿ ಬಿಜೆಪಿ-ಜೆಡಿಸ್ ಒಗ್ಗೂಡಿ ಕಾರ್ಯತಂತ್ರ ನಡೆಸುವ ಸುಳಿವನ್ನು ಶಾಸಕ ಪ್ರೀತಂ ಗೌಡ ನೀಡಿದ್ದಾರೆ.
ಹಾಸನದಲ್ಲಿ ಬುಧವಾರ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಪ್ರೀತಂ ಗೌಡ, ‘ನೀವು ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿ ಅಭ್ಯರ್ಥಿಯಾದ ನನಗೇ ಮತ ಹಾಕಿದಂತೆ’ ಎಂದು ಹೇಳಿ ಅಚ್ಚರಿಗೆ ಕಾರಣರಾಗಿದ್ದಾರೆ.
‘ದೇವೇಗೌಡರು ಮತ್ತು ಮೋದಿಯವರು ಮಾತನಾಡಿಕೊಂಡಿದ್ದಾರೆ. ಎಲ್ಲ ನದಿಗಳ ನೀರು ಹರಿಯುವುದು ಸಮುದ್ರಕ್ಕೇ. ಜೆಡಿಎಸ್ ಗೆಲ್ಲುವುದು 20-25 ಸೀಟು. ನೀವು ಜೆಡಿಎಸ್‌ಗೆ ಓಟು ಹಾಕಿದರೂ ಅದು ನಮ್ಮ ಬಳಿಗೇ ಬರಬೇಕು’ ಎಂದು ಪ್ರೀತಂ ಗೌಡ ಮಾತನಾಡಿದ್ದಾರೆ. ಪ್ರೀತಂ ಗೌಡರ ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಮತ ಹಾಕಿದಂತೆ; ಮೈತ್ರಿಯ ಕುರಿತು ಪ್ರೀತಂ ಗೌಡ ಸುಳಿವು#KarnatakaElection #PreethamGowda #Karnataka #Hassan pic.twitter.com/oYf7R9sFLF
— Vistara News (@VistaraNews) April 27, 2023
ಈ ನಡುವೆ, ಜೆಡಿಎಸ್ ವಿರುದ್ದ ಭರ್ಜರಿ ಕಾದಾಟ ನಡೆಸುತ್ತಿರುವ ಬಿಜೆಪಿ ಪಾಲಿಗೆ ಪ್ರೀತಂ ಗೌಡರ ಈ ಹೇಳಿಕೆ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ.