ಬೆಳಗಾವಿ: ರಾಜಕೀಯ ನಾಯಕತು ರಾಜಕಾರಣದ ಅಂಗಳದಲ್ಲಿ ಸಾಂಪ್ರದಾಯಿಕ ಎದುರಾಳಿಗಳು. ಆದರೆ ನಿಜ ಜೀವನದಲ್ಲಿ ಸಮ್ಮಿತ್ರರು. ಇವರೂ ಹಾಗೇನೆ. ಚುನಾವಣಾ ಅಖಾಡದಲ್ಲಿ ಪರಸ್ಪರ ವಾಗ್ಬಾಣ ಪ್ರಯೋಗಿಸುತ್ತಾ ರಾಜಕೀಯ ಅಖಾಡದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಈ ನಾಯಕರದ್ದು ತೆರೆಮರೆಯಲ್ಲಿ ನಿತ್ಯವೂ ಸ್ನೇಹ ಪರ್ವ.
ಚುನಾವಣಾ ಪ್ರಚಾರಕ್ಕಾಗಿ ಅಖಾಡಕ್ಕೆ ತೆರಳುವ ಮಧ್ಯೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದುರಾದರು. ದಶಕದ ಹಿಂದೆ ಜನತಾ ಪರಿವಾರದಲ್ಲಿ ಒಂದಾಗಿ ದುಡಿಯುತ್ತಿದ್ದ ಈ ನಾಯಕರದ್ದು ಈಗಲೂ ಆಗಿನದ್ದೇ ಗರ್ವ, ಆಗಿನದ್ದೇ ಸ್ನೇಹ. ಇವರಿಬ್ಬರ ಹಸ್ತಲಾಘವ ಕಂಡು ನೋಡುಗರು ಮೂಕವಿಸ್ಮಿತರಾದದ್ದು ಸತ್ಯ.
Former CM @siddaramaiah and CM @BSBommai meets at Belagavi airport .
Meet and greet 😁 pic.twitter.com/NH0dLwxMKk
— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) April 26, 2023
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಮುಖಾಮುಖಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಪರಸ್ಪರ ಕುಶಲೋಪರಿ ವಿಚಾರಿಸಿದರು.
ನಿನ್ನೆಯವರೆಗೂ ಪರಸ್ಪರ ಭ್ರಷ್ಟಾಚಾರ ಬಗ್ಗೆ ಕಾಲ್ಕೆರೆದು ಜಗಳಕ್ಕೆ ಬರುತ್ತಿದ್ದವರು ಇವರೇನಾ ಎಂಬ ಪ್ರಶ್ನೆ ಅಲ್ಲಿದ್ದವರನ್ನು ಕಾಡುವಂತಿತ್ತು.





















































