ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಸುವ ಅಭ್ಯರ್ಥಿಗಳ ಸಂಬಂಧಿಗಳು ಎಸ್ಪಿ-ಡಿಸಿ ಹುದ್ದೆಗಳಲ್ಲಿದ್ದರೆ ವರ್ಗಾವಣೆ ಮಾಡುವುದು ಸಹಜ ಪ್ರಕ್ರಿಯೆ. ಇದೀಗ ನಾಪಪತ್ರ ಸಲ್ಲಿಕೆ ಮುಗಿದಿರುವಂತೆಯೇ ಚುನಾವಣಾ ಅಖಾಡದಲ್ಲಿರುವ ನಾಯಕರ ಸಂಬಂಧಿಗಳಾದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಸಚಿವ ಮುನಿರತ್ನ ಅವರು ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರ ಅಳಿಯ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿಲಾಗಿದೆ. ದಾವಣಗೆರೆಗೆ ಅರುಣ್ ಕೆ ಅವರನ್ನು ಎಸ್ಪಿಯಾಗಿ ಸರ್ಕಾರ ನಿಯುಕ್ತಿ ಮಾಡಿದೆ.
ಮಧುಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎನ್.ರಾಜಣ್ಣ ಅವರ ಅಳಿಯ ಬೆಂಗಳೂರಿನ ವೈಟ್ಫೀಲ್ಡ್ ಡಿಸಿಪಿ ಗಿರೀಶ್ ಅವರನ್ನೂ ವರ್ಗಾವಣೆ, ಮಾಡಿರುವ ಸರ್ಕಾರ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ನೂತನ ಡಿಸಿಪಿ ಆಗಿ ನಿಯುಕ್ತಿ ಮಾಡಿದೆ.





















































