ಲಂಡನ್: ಮನುಕುಲಕ್ಕೆ ಸಮಾನತೆಯ ಸೂತ್ರವನ್ನು ಹೇಳಿಕೊಟ್ಟವರು ಬಸವೇಶ್ವರರು. ಜಗತ್ತಿನ ಆಡಳಿತ ಸೂತ್ರದಲ್ಲಿ ‘ಅನುಭವ ಮಂಟಪದ’ ಕಲ್ಪನೆಯ ಬೆಸುಗೆಯನ್ನು ಮಾಡಿದವರೂ ಬಸವಣ್ಣ. ನಾಡಿನೆಲ್ಲೆದೆ ಈ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರ ಜನ್ಮದಿನವನ್ನು ಬಗೆಬಗೆಯಲ್ಲಿ ಆಚರಿಸಲಾಯಿತು.
ಭಾರತ ಮೂಲದ ಬಸವಣ್ಣನ ಆರಾಧನೆಯನ್ನು ಲಂಡನ್‌ನಲ್ಲಿರುವ ಭಾರತೀಯರೂ ಅರ್ಥಪೂರ್ಣವಾಗಿ ಆಚರಿಸಿ ಗಮನಸೆಳೆದರು. ಭಾರತೀಯ ಪ್ರಜಾಸತ್ತೆಯ ಹಬ್ಬಗಳ ಸಂದರ್ಭದಲ್ಲಿ ಲಂಡನ್‌ನ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಂಡೆಯ ಆಲ್ಬರ್ಟ್ ಎಂಬಾಕ್‌ಮೆಂಟ್‌ನಲ್ಲಿರುವ ಬಸವೇಶ್ವರ ಪ್ರತಿಮೆ ಬಳಿ ವಿಶೇಷ ಕಾರ್ಯಕ್ರಮಗಳು ಏರ್ಪಾಡಾಗುತ್ತಿರುತ್ತವೆ. ಅದರಂತೆ ಬಸವ ಜಯಂತಿಯ ದಿನವಾದ ಇಂದು ಲಂಡನ್‌ನ ಬಸವೇಶ್ವರ ಪ್ರತಿಮೆ ಬಳಿ ದೇಶಪ್ರೇಮದ ಕೈಂಕರ್ಯ ನೆರವೇರಿಸಲಾಯಿತು.
ಭಾರತೀಯ ಹೈಕಮೀಷನರ್ ವಿಕ್ರಮ್ ದೊರೆಸ್ವಾಮಿ ಸಹಿತ ಅನೇಕ ಅಧಿಕಾರಿಗಳು, ಉದ್ಯಮಿಗಳು, ಭಾರತ ಮೂಲದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಸವೇಶ್ವರಿಗೆ ಗೌರವ ಸಮರ್ಪಿಸಿದರು ಎಂದು ಲಂಡನ್‌ನ ಬಸವೇಶ್ವರ ಫೌಂಡೇಷನ್ ಅಧ್ಯಕ್ಷರೂ ಆದ ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ.
ಮೋದಿಯನ್ನು ನೆನಪಿಸಿದ ಕೈಂಕರ್ಯ..
ಒಂದೊಮ್ಮೆ ಜಗತ್ತನ್ನೇ ಆಳಿದವರು ಬ್ರಿಟಿಷರು. ಜಗತ್ತಿಗೆ ಸುಗಮ ಆಡಳಿತ ಸೂತ್ರವಾಗಿ ‘ಅನುಭವ ಮಂಟಪದ’ ಕಲ್ಪನೆಯನ್ನು ಹೇಳಿಕೊಟ್ಟ ಜಗಜ್ಯೋತಿ ಬಸವೇಶ್ವರರರು ಅದೇ ಬ್ರಿಟೀಷರ ನೆಲದಲ್ಲಿ ಹೆಗ್ಗುರುತಾಗಿರಬೇಕು ಎಂಬ ಉದ್ದೇಶದಿಂದ ಲಂಡನ್ ಮೇಯರ್ ಆಗಿದ್ದ ಡಾ.ನೀರಜ್ ಪಾಟೀಲ್ ಅವರು ವಿಶೇಷ ಪ್ರಯತ್ನ ಮಾಡಿದ್ದರು. ಅದರ ಭಾಗವಾಗಿ ಕನ್ಬಡಿಗರನ್ನು ಒಗ್ಗೂಡಿಸಿ ಡಾ.ನೀರಜ್ ಪಾಟೀಲ್ ಅವರು, ಲಂಡನ್‌ನ ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆಯ ಆಲ್ಬರ್ಟ್ ಎಂಬಾಕ್‌ಮೆಂಟ್‌ನಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸಿದ್ದು ಇತಿಹಾಸ.
2015ರ ನವೆಂಬರ್ 14ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಬಸವೇಶ್ವರರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ‘ಅನುಭವ ಮಂಟಪದ’ ಕಲ್ಪನೆ ನೀಡಿದ್ದ ಬಸವಣ್ಣ ಅವರು ಮಹಾನ್ ಮಾನವತಾವಾದಿ’ ಎಂದು ಮೋದಿ ಬಣ್ಣಿಸಿದ್ದರು. ಜಾತಿ ಅಸಮಾನತೆ ಹೋಗಲಾಡಿಸುವಲ್ಲಿ ಬಸವಣ್ಣರ ಪಾತ್ರ ಮಹತ್ತರವಾದದ್ದು. ಅನುಭವ ಮಂಟಪದ ಕಲ್ಪನೆ ನೀಡಿದ್ದ ಬಸವಣ್ಣ ಮಹಾನ್ ಮಾನವತಾವಾದಿ ಎಂದು ಮೋದಿ ಬಣ್ಣಿಸಿದ್ದರು. ಆ ಕಾರ್ಯಕ್ರಮದ ಬಗ್ಗೆ ಬಸವ ಜಯಂತಿಯ ಇಂದಿನ ಕೈಂಕರ್ಯದ ಸಂದರ್ಭದಲ್ಲಿ ಗಣ್ಯರು ನೆನಪಿಸಿಕೊಂಡರು.
ಮೋದಿಯವರಷ್ಟೇ ಅಲ್ಲ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಅನೇಕ ನಾಯಕರು ಭೇಟಿ ನೀಡಿ ಸಮಾನತೆಯ ಹರಿಕಾರನಿಗೆ ಗೌರವ ನಮನ ಸಲ್ಲಿಸಿದ್ದರು. ಇದೀಗ ಲಂಡನ್ ಭೇಟಿ ಕೈಗೊಳ್ಳುವ ಭಾರತ ಮೂಲಧ ಗಣ್ಯರ ಪಾಲಿಗೆ ಈ ಸ್ಥಳ ಆಕರ್ಷಣೆಯ ತಾಣವಾಗಿ ಗುರುತಾಗಿದೆ.