ಬೆಂಗಳೂರು : ರಾಜ್ಯದಲ್ಲಿ ಎಚ್3ಎನ್2 ವೈರಸ್ ಮರಣ ಮೃದಂಗ ಭಾರಿಸುತ್ತಿದೆ. ಈ ಮಾರಣಾಂತಿಕ ಸೋಂಕಿಗೆ ಹಾಸನದ 82 ವರ್ಷದ ವೃದ್ದರೊಬ್ಬರು ಬಲಿಯಾಗಿದ್ದಾರೆ. ಮಾರ್ಚ್ ಒಂದರಂದು ಮೃತಪಟ್ಟ ವ್ಯಕ್ತಿಯ ಪರೀಕ್ಷಾ ವರದಿ ತಡವಾಗಿ ಸಿಕ್ಕಿದ್ದು, ಅವರು ಎಚ್3ಎನ್2 ಸೋಂಕಿಗೆ ಬಲಿಯಾಗಿರುವುದು ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಇದು ರಾಜ್ಯದಲ್ಲಿ ಎಚ್3ಎನ್2 ಸೋಂಕಿಗೆ ಮೊದಲ ಬಲಿ ಎನ್ನಲಾಗಿದೆ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಈ ವ್ಯಕ್ತಿಯನ್ನು ಫೆಬ್ರವರಿ 24ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರ್ಚ್ 1ರಂದು ನಿಧನ ಹೊಂದಿದ್ದಾರೆ. ಅವರ ರಕ್ತದ
ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಾರ್ಚ್ 6 ಪರೀಕ್ಷಾ ಫಲಿತಾಂಶದಲ್ಲಿ ವೈರಸ್ ಸೋಂಕಿಗೆ ಒಳಗಾಗಿದ್ದ ಸಂಗತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

























































