ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡೆ ಬಗ್ಗೆ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿವೇಶನದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಈ ವಾರ ಸದನಕ್ಕೆ ಹಾಜರಾಗಲ್ಲ ಎಂದು ಸಭಾಧ್ಯಕ್ಷರಿಂದ ಅನುಮತಿ ಪಡೆಯಲು ತಾವು ಬೆಳಗಾವಿ ತೆರಳಿದರೂ ಸದನಕ್ಕೆ ಹಾಜರಾಗುವುದಿಲ್ಲ ಎಂದರು.
ಇದಕ್ಕೆ ಕಾರಣ ಕೊಟ್ಟಿರುವ ಈಶ್ವರಪ್ಪ, ಅಪರಾಧದಿಂದ ಮುಕ್ತರಾದವರಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗಲ್ಲ. ಹಾಗಾಗಿ ಸಂಪುಟಕ್ಕೆ ಮರು ಸೇರ್ಪಡೆ ಮಾಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದರು. ಇದೀಗ ನನ್ನ ಪ್ರಕರಣದಲ್ಲಿ ಕ್ಲೀನ್ ಚೀಟ್ ಸಿಕ್ಕಿದ್ದರೂ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಂತ್ರಿ ಮಾಡುವುದಾಗಿ ತಿಳಿಸುತ್ತಾ ಬಂದಿರುವ ಸಿಎಂ ಅವರು ಈವರೆಗೂ ಯಾಕೆ ಸಂಪುಟಕ್ಕೆ ತಗೆದುಕೊಳ್ಳಲಿಲ್ಲ ಎಂದು ಬೇಸರ ಹೊರವನ್ನು ಈಶ್ವರಪ್ಪ ಹಾಕಿದರು.





















































