ವೀಡಿಯೋ ಬಗ್ಗೆ ಸಾಮಾಜಿಕ ಹೋರಾಟಗಾರರು ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದು, ಪರ್ಸಂಟೇಜ್ ಅವಾಂತರಕ್ಕೆ ಇನ್ನೇನು ಸಾಕ್ಷಿ ಬೇಕು..? ಎಂದು ಪ್ರಶ್ನಿಸಿದ್ದಾರೆ..
ಬೆಂಗಳೂರು: ಇತ್ತೀಚೆಗಷ್ಟೇ ತುಮಕೂರಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಬಾಣಂತಿ ಹಾಗೂ ಹಸುಗೂಸುಗಳು ಸಾವನ್ನಪ್ಪಿದ್ದ ಘಟನೆ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಅಣಕಿಸುವಂತಿತ್ತು. ಆರೋಗ್ಯ ಇಲಾಖೆಯನ್ನು ಮುನ್ನಡೆಸಲಾಗದ ಸಚಿವ ಸುಧಾಕರ್ ರಾಜೀನಾಮೆಗೆ ವ್ಯಾಪಕ ಆಗ್ರಹ ಕೇಳಿಬಂದಿದ್ದವು. ಇದೀಗ ಮತ್ತಷ್ಟು ಕರ್ಮಕಾಂಡ ಬಯಲಾಗಿದೆ. ಆ ಇಲಾಖೆಯ ಸಚಿವರ ರಾಜೀನಾಮೆಗೆ ಮತ್ತೆ ಆಗ್ರಹ ಕೇಳಿಬಂದಿದೆ.
ಏನಿದು ಹೊಸ ಕರ್ಮಕಾಂಡ..? ಯಾರಿಗೆಲ್ಲಾ ಎಷ್ಟೆಷ್ಟು ಪಾಲು..?
ಸರ್ಕಾರಿ ಆಸ್ಪತ್ರೆಯೊಂದರಲ್ಲಿ ರೋಗಿಗಳಿಂದ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಆರೋಗ್ಯ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತ ವೀಡಿಯೋ ತುಣುಕೊಂದು ಬೊಮ್ಮಾಯಿ ಸರ್ಕಾರದಡಿ ರಾಜ್ಯದಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ಅನಾವರಣ ಮಾಡಿದಂತಿದೆ.
“ತುಮಕೂರಿನಲ್ಲಿ ಬಾಣಂತಿ ಅವಳಿ ಮಕ್ಕಳ ಸಾವಿನ ನೋವು ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ರಾಜ್ಯದಾದ್ಯಂತ ಹೆರಿಗೆ ಬಾಣಂತಿಗಳನ್ನು ಇಟ್ಟುಕೊಡು ಭ್ರಷ್ಟಾಚಾರ ಮಾಡುವುದನ್ನು ಸರ್ಕಾರಿ ಆಸ್ಪತ್ರೆಗಳು ಬಿಟ್ಟಿಲ್ಲ. ಲಂಚ ತಗೆದುಕೊಳ್ಳುವುದರಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡುವುದಿಲ್ಲ 6000 ಪಿಕ್ಸ್ ಲಂಚ 2000 ಅವರಿಗೆ 2000 ಇವರಿಗೆ 2000 ನನಗೆ..” ಎಂಬ ಸಂಭಾಷಣೆಯ ವೀಡಿಯೋ ಈ ಸರ್ಕಾರದ ಲಂಚ ಪುರಾಣವನ್ನು ಜಗತ್ತಿಗೆ ತೋರಿಸುವಂತಿದೆ.
ತುಮಕೂರಿನಲ್ಲಿ ಬಾಣಂತಿ ಅವಳಿ ಮಕ್ಕಳ ಸಾವು ಇನ್ನೂ ಜನರಿಂದ ಮರೆಯಾಗಿಲ್ಲ ರಾಜ್ಯದಾದ್ಯಂತ ಹೆರಿಗೆ ಬಾಣಂತಿಗಳನ್ನು ಇಟ್ಟುಕೊಡು ಭ್ರಷ್ಟಾಚಾರ ಮಾಡುವುದನ್ನು ಸರ್ಕಾರಿ ಆಸ್ಪತ್ರೆಗಳು ಬಿಟ್ಟಿಲ್ಲ
ನಾವು ಲಂಚ ತಗೆದುಕೊಳ್ಳುವುದರಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡುವುದಿಲ್ಲ 6000 ಪಿಕ್ಸ್ ಲಂಚ 2000 ಅವರಿಗೆ 2000 ಇವರಿಗೆ 2000 ನನಗೆ . pic.twitter.com/VypmVe8IrP— Gnana Sindhu Swamy (@Gnanasindhus) November 25, 2022
“ನೀವು ಬರೀ 2000 ಕೊಟ್ರೆ ನಾನು ಹೋಗಿ ಐದು ನೂರು ಐದು ನೂರು ಎಲ್ಲರಿಗೂ ಹಂಚುವುದಕ್ಕೆ ಆಗಲ್ಲ ನಮ್ಮದು 6000 ಪಿಕ್ಸ್ ಲಂಚ ಅಂದ್ರೆ ಲಂಚ. ‘ಇದರಲ್ಲಿ ನಿಮಗೆ ಕಮಿಷನ್ ಎಷ್ಟು ಕೊಡತ್ತ ಇರೋದು ಬಹಿರಂಗಪಡಿಸಿ’ ಎಂದು ಬೊಮ್ಮಾಯಿ ಹಾಗೂ ಸುಧಾಕರ್ ಹೆಸರುಗಳನ್ನು ಪ್ರಸ್ತಾಪಿಸಿ ಪ್ರಶ್ನೆ ಮಾಡಿರುವ ಟ್ವೀಟ್ ಅನೇಕಾನೇಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ನೀವು ಬರೀ 2000 ಕೊಟ್ರೆ ನಾನು ಹೋಗಿ ಐದು ನೂರು ಐದು ನೂರು ಎಲ್ಲರಿಗೂ ಹಂಚುವುದಕ್ಕೆ ಆಗಲ್ಲ ನಮ್ಮದು 6000 ಪಿಕ್ಸ್ ಲಂಚ ಅಂದ್ರೆ ಲಂಚ .@mla_sudhakar @BSBommai @CMofKarnataka ಇವರೆಲ್ಲಾ ನಿಮಗೆ ಕಮಿಷನ್ ಎಷ್ಟು ಕೊಡತ್ತ ಇರೋದು ಬಹಿರಂಗಪಡಿಸಿ !?
— Gnana Sindhu Swamy (@Gnanasindhus) November 25, 2022
ಈ ಲಂಚಾವತಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ‘ಇವರಿಗೆ ತಿಂಗಳಿಗೆ ಇಷ್ಟು ಸಂಗ್ರಹಿಸಿ ಕೊಡಬೇಕು ಎಂದು ಗುರಿ ನಿಗದಿ ಪಡಿಸುತ್ತಾರೆ. ಇವರೆಲ್ಲಾ ತಿಗಣೆ ಹಾಗೆ ಜನರ ರಕ್ತ ಹೀರಿ ತಾವು ಖುಷಿ ಪಟ್ಟು, ಉನ್ನತ ಮಟ್ಟದ ಮಹಾತ್ಮರಿಗೆ ವ್ಯವಸ್ಥೆ ಮಾಡುವ ಅನಿವಾರ್ಯತೆ ಇರುತ್ತೆ. ಇದು ಎಲ್ಲಾ ಇಲಾಖೆಯಲ್ಲಿ ಸಹಜ. ಸರ್ಕಾರ ಹಾಗೂ ವ್ಯವಸ್ಥೆ ಸೇರಿ ಮಾಡುವ ದಂಧೆ. ಇನ್ನು ನಿಯಂತ್ರಿಸುವವರು ಯಾರು? ದುರಂತ…” ಎಂಬ ಪ್ರತಿಕ್ರಿಯೆ ಕೂಡಾ ಬಸವರಾಜ್ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ವ್ಯವಸ್ಥೆ ಹೇಗಿದೆ ಎಂಬುದರ ವಿಶ್ಲೇಷಣೆಯಂತಿದೆ.
ಇವರಿಗೆ ತಿಂಗಳಿಗೆ ಇಷ್ಟು ಸಂಗ್ರಹಿಸಿ ಕೊಡಬೇಕು ಎಂದು ಗುರಿ ನಿಗದಿ ಪಡಿಸುತ್ತಾರೆ.ಇವರೆಲ್ಲಾ ತಿಗಣೆ ಹಾಗೆ ಜನರ ರಕ್ತ ಹೀರಿ ತಾವು ಕುಶಿ ಪಟ್ಟು, ಉನ್ನತ ಮಟ್ಟದ ಮಹಾತ್ಮರಿಗೆ ವ್ಯವಸ್ಥೆ ಮಾಡುವ ಅನಿವಾರ್ಯತೆ ಇರುತ್ತೆ. ಇದು ಎಲ್ಲಾ ಇಲಾಖೆಯಲ್ಲಿ ಸಹಜ.ಸರಕಾರ ಹಾಗೂ ವ್ಯವಸ್ಥೆ ಸೇರಿ ಮಾಡುವ ದಂಧೆ. ಇನ್ನು ನಿಯಂತ್ರಿಸುವ ವರು ಯಾರು? ದುರಂತ.
— Sundar G K (@SundarGK13) November 26, 2022
ಇದೇ ವೇಳೆ, ‘ಬ್ರಷ್ಟಾಚಾರದ ಎಲ್ಲೆಡೆ ತಾಂಡವವಾಡುತ್ತಿದೆ.ಇದರ ಪರಿಣಾಮ ಈ ಸಾವು..ಇದು ಎಲ್ಲೆಡೆ ನಡೆಯುತ್ತಿದೆ. ನಿಯಂತ್ರಿಸಲು ಆರೋಗ್ಯ ಸಚಿವರು ಅಸಫಲ. ಆರೋಗ್ಯ ಸಚಿವರು ರಾಜೀನಾಮೆ ಕೊಡುವದು ಒಳಿತು” ಎಂದು ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರಷ್ಟಾಚಾರದ ಎಲ್ಲೆಡೆ ತಾಂಡವವಾಡುತ್ತಿದೆ.ಇದರ ಪರಿಣಾಮ ಈ ಸಾವು..ಇದು ಎಲ್ಲೆಡೆ ನಡೆಯುತ್ತಿದೆ ನಿಯಂತ್ರಿಸಲು ಆರೋಗ್ಯ ಸಚಿವರು ಅಸಫಲ.ಆರೋಗ್ಯ ಸಚಿವರು ರಾಜೀನಾಮೆ ಕೊಡುವದು ಒಳಿತು.
— Sundar G K (@SundarGK13) November 25, 2022
ಇದನ್ನೂ ಓದಿ.. ಸಚಿವ ಸುಧಾಕರ್ ಬಗ್ಗೆ RSS-BJP ಕಾರ್ಯಕರ್ತರಲ್ಲೇ ಆಕ್ರೋಶ
ಆರೋಗ್ಯ ಸಚಿವ ಡಾ.ಸುಧಾಕರ್ ಬಗ್ಗೆ ಆಡಳಿತಾರೂಢ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಇತ್ತೀಚೆಗೆ ತುಮಕೂರಿನಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಶಿಶುಗಳು ಸಾವನ್ನಪಿದ ಘಟನೆ ಸಂದರ್ಭದಲ್ಲಿ ಬಿಜೆಪಿ-ಆರೆಸ್ಸೆಸ್ ಸೇನಾನಿಗಳೇ ಆರೋಗ್ಯ ಇಲಾಖೆ ಹಾಗೂ ಸುಧಾಕರ್ ಕಾರ್ಯವೈಖರಿ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಇದೀಗ ಈ ಲಂಚಾವತಾರವನ್ನು ಹೋಲುವ ವೀಡಿಯೋ ಮತ್ತೊಂದು ರೀತಿ ಸಂಚಲನ ಸೃಷ್ಟಿಸಿದೆ.
ಈ ನಡುವೆ, ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರರು, ಪರ್ಸಂಟೇಜ್ ಅವಾಂತರ ಸಂಬಂಧ ಬೇರೆ ಇನ್ನೇನು ಸಾಕ್ಷಿ ಬೇಕು ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ. ಇದು ಎಲ್ಲಿ ಯಾವಾಗ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದೂ ಒತ್ತಾಯಿಸಿದ್ದಾರೆ.




































































