ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ಆಟೋ ರಿಕ್ಷಾ ಸ್ಫೋಟಗೊಂಡ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.
ಮಂಗಳೂರಿನ ನಾಗುರಿ ಬಳಿ ಸಂಜೆ ಇದ್ದಕ್ಕಿದ್ದಂತೆ ಆಟೋ ರಿಕ್ಷಾ ಸ್ಫೋಟಗೊಂಡಿದೆ. ನಿಗೂಢ ರೀತಿಯಲ್ಲಿ ಅಟೋ ರಿಕ್ಷಾ ಒಳಗಡೆ ಸ್ಫೋಟ ಆಗಿದ್ದು, ಆ ರಿಕ್ಷಾದಲ್ಲಿ ಛಿದ್ರಗೊಂಡ ಕುಕ್ಕರ್ ಪತ್ತೆಯಾಗಿದೆ. ಅಟೋದಲ್ಲಿದ್ದ ಪ್ರಯಾಣಿಕ ಹಾಗೂ ಡ್ರೈವರ್ಗೆ ಸುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
https://twitter.com/unsocial2023/status/1593964489191194624?t=eFE8fKXKpEEGXrxUGHaiZQ&s=19
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸಿದ್ದು, ಸ್ಫೋಟದ ನಿಗೂಢತೆ ಬೇಧಿಸಲು ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.
























































