ಮಂಗಳೂರು: ಮಂಗಳೂರು ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನ.19ರ ಶನಿವಾರ ಲೋಕಾರ್ಪಣೆ ಮಾಡಿದರು.
1837 ರಲ್ಲಿ ಕೆನರಾ ಮತ್ತು ಕೊಡಗು ಪ್ರಾಂತದಲ್ಲಿ ರೈತರನ್ನು ಒಗ್ಗೂಡಿಸಿಕೊಂಡು ಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸಿ, ಈ ಪ್ರಾಂತವನ್ನು 13 ದಿನಗಳ ಕಾಲ ಸ್ವತಂತ್ರಗೊಳಿಸಿದವರು ಕೆದಂಬಾಡಿ ರಾಮಯ್ಯ ಗೌಡರು. @BSBommai ಸರ್ಕಾರವು, ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಧೀರೋದಾತ್ತ ದೇಶಪ್ರೇಮಿಗೆ ಗೌರವವನ್ನು ಸಲ್ಲಿಸಿದೆ. pic.twitter.com/iyNNgj4Ljn
— BJP Karnataka (@BJP4Karnataka) November 19, 2022
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಳೆದು ಹೋದ ಇತಿಹಾಸವನ್ನು ನೆನಪಿಸಿದ, ಮರೆತು ಹೋದ ವೀರ ಮಹಾನಾಯಕನನ್ನು ಜಗತ್ತಿಗೆ ತಿಳಿಸಿದ ವೀರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ನಿರ್ಮಾಣ ಸಮಿತಿಗೆ ಹಾಗೂ ಮಂಗಳೂರಿನ ನಾಗರೀಕರಿಗೆ ಅನಂತ ಧನ್ಯವಾದಗಳು ಎಂದರು. ಸ್ವಾತಂತ್ರ್ಯದ ಸಮರದಲ್ಲಿ ಮರೆತುಹೋದ ಮಹಾನ್ ನಾಯಕರಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದವರು ಹೇಳಿದರು.
ಕಳೆದು ಹೋದ ಇತಿಹಾಸವನ್ನು ನೆನಪಿಸಿದ, ಮರೆತು ಹೋದ ವೀರ ಮಹಾನಾಯಕನನ್ನು ಜಗತ್ತಿಗೆ ತಿಳಿಸಿದ ವೀರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ನಿರ್ಮಾಣ ಸಮಿತಿಗೆ ಹಾಗೂ ಮಂಗಳೂರಿನ ನಾಗರೀಕರಿಗೆ ನನ್ನ ಅನಂತ ಧನ್ಯವಾದಗಳು. ಸ್ವಾತಂತ್ರ್ಯದ ಸಮರದಲ್ಲಿ ಮರೆತುಹೋದ ಮಹಾನ್ ನಾಯಕರಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯವಾಗಿದೆ. pic.twitter.com/qYgU8yOjD2
— Basavaraj S Bommai (Modi Ka Parivar) (@BSBommai) November 19, 2022
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು. ಸಚಿವರಾದ ಎಸ್. ಅಂಗಾರ, ಡಾ. ಅಶ್ವತ್ಥ್ ನಾರಾಯಣ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದ ಡಿ.ವಿ. ಸದಾನಂದ ಗೌಡ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸಂಜೀವ ಮಠಂದೂರು, ಯಿ.ಟಿ. ಖಾದರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಇತರೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
























































