ದೆಹಲಿ: ಮತ್ತೊಂದು ಜಿದ್ದಾಜಿದ್ದಿನ ಅಖಾಡಕ್ಕೆ ಮೋದಿ ತವರು ರಾಜ್ಯ ಗುಜರಾತ್ ಸಾಕ್ಷಿಯಾಗಲಿದೆ. ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು ರಾಜಕೀಯ ಮೇಲಾಟಕ್ಕೆ ತಯಾರಿ ನಡೆದಿದೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದರು. ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ವೇಳಾಪಟ್ಟಿ ಹೀಗಿದೆ:
ಡಿಸೆಂಬರ್ 1 : ಮೊದಲ ಹಂತದ ಮತದಾನ ಡಿಸೆಂಬರ್ 5 : ಎರಡನೇ ಹಂತದ ಮತದಾನ ಡಿಸೆಂಬರ್ 8 : ಮತಗಳ ಎಣಿಕೆ