ವೈಭಮೋಪೇತ ಜಾತ್ರೆಯ ಸಂದರ್ಭದಲ್ಲಿ ದೇವರ ರಥ ದೇಗುಲಕ್ಕೆ ಪ್ರದಕ್ಷಿಣೆ ಬರಬೇಕಿತ್ತು. ಆದರೆ ಅರ್ದ ದೂರ ಕ್ರಮಿಸುತ್ತಿದ್ದಂತೆಯೇ ಚಕ್ರದ ಕೊಂಡಿ ಕಡಿದುಕೊಂಡಿದೆ. ಭಾರ ತಾಳಲಾರದೆ ರಥ ಮಗುಚಿಬಿದ್ದಿದೆ
ಚಾಮರಾಜನಗರ: ಇತಿಹಾಸ ಪ್ರಸಿದ್ಧ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ವೇಳೆ ರಥ ಉರುಳಿ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆ ಅಮಚವಾಡಿ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಕೊಳ್ಳೆಗಾಲ ಸಮೀಪದ ಅಮಚವಾಡಿ ಬಳಿಯ ಚನ್ನಪ್ಪನಪುರದ ವೀರಭದ್ರ ಸ್ವಾಮಿ ರಥೋತ್ಸವ ಇಂದು ನಡೆಯುತ್ತಿತ್ತು. ಚೆನ್ನಪ್ಪನಪುರದ ಬೆಟ್ಟದ ಮೇಲಿರುವ ಈ ವೀರಭದ್ರ ಸ್ವಾಮಿ ರಥೋತ್ಸವ ವೀಕ್ಷಿಸಲು ಸಾವಿರಾರು ಜನರ ಭಾಗಿಯಾಗಿದ್ದರು. ಭಕ್ತ ಸಮೂಹದ ಹರ್ಷೋದ್ಗಾರದ ನಡುವೆ ರಥೋತ್ಸವ ಸಾಗುತ್ತಿದ್ದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ.
ವೈಭಮೋಪೇತ ಜಾತ್ರೆಯ ಸಂದರ್ಭದ ಈ ರಥ ದೇವಾಲಯಕ್ಕೆ ಪ್ರದಕ್ಷಿಣೆ ಬರಬೇಕಿತ್ತು. ಆದರೆ ಅರ್ದ ದೂರ ಕ್ರಮಿಸುತ್ತಿದ್ದಂತೆಯೇ ಚಕ್ರದ ಕೊಂಡಿ ಕಡಿದುಕೊಂಡಿದೆ. ಭಾರ ತಾಳಲಾರದೆ ರಥ ಮಗುಚಿಬಿದ್ದಿದೆ ಎನ್ನಲಾಗಿದೆ.
ಈ ಜಾತ್ರೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಜಮಾಯಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
























































