ರಾಯಚೂರು: ಕರುನಾಡಿನಾದ್ಯಂತ ಸಂಚಲನ ಮೂಡಿಸಿರುವ ‘ಭಾರತ್ ಜೋಡೋ ಯಾತ್ರೆ’ ಇದೀಗ ಬೆರೆ ರಾಜ್ಯ ತೆಲಂಗಾಣ ಪ್ರವೇಶಿಸಿದೆ. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ‘ಜೋಡೋ’ ಪಾದಯಾತ್ರಿಗಳಿಂದ ‘Thank you Karnataka’ ಘೋಷಣೆ ಮೊಳಗಿತು.
ಜೇರಳದಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ಚಾಮರಾಜನಗರ ಮೂಲಕ ಕರ್ನಾಟಕ ಪ್ರವೇಶಿಸಿ 20ಕ್ಕೂ ಹೆಚ್ಚು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಕ್ರಮಿಸಿತು. ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗಿದ ಈ ಯಾತ್ರೆಯುದ್ದಕ್ಜೂ ಜನಸಾಗರವೇ ಭಾಸವಾಯಿತು. ರಾಜ್ಯದ ಇತಿಹಾಸದಲ್ಲಿ ಇಂಥದ್ದೊಂದು ಯಾತ್ರೆಯಾಗಲೀ, ಉಷ್ಟೊಂದು ಸಂಖ್ಯೆಯಲ್ಲಿ ಜನಸಾಗರ ನೆರೆದಿದ್ದ ಇತಿಹಾಸವಾಗಲೀ ಇಲ್ಲ. ಇಂಥದ್ದೊಂದು ದಾಖಲರ ಕಾಂಗ್ರೆಸ್‌ನಿಂದ ನಿರ್ಮಾಣವಾಗಿದೆ.
ಇಂದು ಈ ಯಾತ್ರೆಯು ರಾಯಚೂರಿನ ಯರವಾರದಿಂದ ತೆಲಂಗಾಣ ಪ್ರವೇಶಿಸುವ ಮೂಲಕ ಕರ್ನಾಟಕದಿಂದ ನಿರ್ಗಮಿಸಿದೆ. ರಾಜ್ಯವನ್ಬು ತೊರೆಯುತ್ತಿದ್ದಂತೆಯೇ ಜನಸಾಗರದ ನಡುವೆ ‘ಕರುನಾಡಿಗೆ ವಂದನೆ’ ಘೋಷಣೆ ಮೊಳಗಿತು.
https://twitter.com/bharatjodo/status/1584032981030961155?t=QWCmWb7HcSgXoDsrZcgREA&s=19
ಸಾಮಾಜಿಕ ಜಾಲತಾಣಗಳಲ್ಲೂ ಈ ರೀತಿಯ ಘೋಷಣೆ ಪ್ರತಿಧ್ವನಿಸಿದೆ. ‘Thank you for the love Karnataka’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜನಸಾಗರದೊಂದಿಗೆ ಭಾರತ್ ಜೋಡೋ ಯಾತ್ರೆ ಸಾಗುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಯಾತ್ರೆ ತೆಲಂಗಾಣ ಪ್ರವೇಶಿಸುತ್ತಿದ್ದಂತೆಯೇ ಅಸ್ದೂರಿ ಸ್ವಾಗತ ಸಿಕ್ಕಿದೆ. ಭಾರೀ ಜನಸಾಗರದೊಂದಿಗೆ ತೆಲಂಗಾಣದಲ್ಲೂ ರಾಹುಲ್ ಕಮಾಲ್ ಪ್ರದರ್ಶಿಸಲಾರಂಭಿಸಿದ್ದಾರೆ.
As the rays of the rising Sun touch the ground… the Sun of Congress
stepped on our soil.
A ray of hope to fulfill Telangana’s aspirations.I Welcome our Charismatic & inspiring leader shri @RahulGandhi Ji on behalf of Telangana. #ManaTelanganaManaRahul #BharatJodoYatra pic.twitter.com/54DxuPWpw4
— Revanth Reddy (@revanth_anumula) October 23, 2022




































































